ಸಾಮಾಗ್ರಿಗಳು
ಬಾದಾಮಿ- 1 ಬಟ್ಟಲು
ಓಟ್ಸ್- 1 ಬಟ್ಟಲು
ಕಡಲೆಕಾಯಿ ಬೀಜ- 1 ಬಟ್ಟಲು
ಮಖಾನಾ- 1 ಬಟ್ಟಲು
ಕುಂಬಳಕಾಯಿ ಬೀಜ- 1 ಬಟ್ಟಲು
ಗೋಡಂಬಿ- ಸ್ವಲ್ಪ
ಕೋಕೋ ಪೌಡರ್ – 3-4 ಚಮಚ
ಮಾಡುವ ವಿಧಾನ
ಒಲೆಯ ಮೇಲೆ ಬಾಣಲೆ ಇಟ್ಟು ಕೋಕೋ ಪೌಡರ್ ಬಿಟ್ಟು ಮೇಲಿನ ಎಲ್ಲಾ ಪದಾರ್ಥಗಳನ್ನೂ ಒಂದೊಂದಾಗಿ ಪ್ರತ್ಯೇಕವಾಗಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಿ.
ಇದು ತಣ್ಣಗಾದ ಬಳಿಕ ಮಿಕ್ಸಿ ಜಾರ್’ಗೆ ಹಾಕಿ ಪುಡಿ ಮಾಡಿ. ಈ ಪುಡಿಗೆ ಕೋಕೋ ಪೌಡರ್ ಹಾಕಿ ಮಿಶ್ರಮ ಮಾಡಿ. ಗಾಳಿಯಾಡದ ಡಬ್ಬಿಗೆ ಹಾಕಿಟ್ಟುಕೊಳ್ಳಿ.
ಮಕ್ಕಳಿಗೆ ಕೊಡುವಾ ಬಿಸಿ ಹಾಲಿಗೆ 1 ಚಮಚ ಬೆಲ್ಲದ ಪುಡಿ ಅಥವಾ ಕಲ್ಲು ಸಕ್ಕರೆ ಹಾಗೂ ಈಗಾಗಲೇ ಮಾಡಿಟ್ಟುಕೊಂಡ ಹೆಲ್ತ್ ಡ್ರಿಂಕ್ ಪೌಡರ್ ನ್ನು ಒಂದು ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೊಡಿ.
ಈ ಹೆಲ್ತ್ ಡ್ರಿಂಕ್ಸ್ ಮಕ್ಕಳ ತೂಕವನ್ನು ಹೆಚ್ಚಿಸುವುದಲ್ಲದೆ, ಮೂಳೆ ಬಲವಾಗಿರವಂತೆ ಹಾಗೂ ಆರೋಗ್ಯವೂ ಉತ್ತಮವಾಗಿರುವಂತೆ ಮಾಡುತ್ತದೆ.