ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಾಸದಿಂದ ಮೊಬೈಲ್ ಪಾಸ್‌ವರ್ಡ್ ಹಂಚಿಕೊಂಡ ಸ್ನೇಹಿತನಿಂದಲೇ ಲಕ್ಷಾಂತರ ರೂ. ವಂಚನೆ ನಡೆದಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ.
ಚಿಂತನ್ ಅರೋರಾ ಮತ್ತು ನವೀನ್ ವೆಮುಲ ಎಂಬ ಇಬ್ಬರು ಸ್ನೇಹಿತರು ಒಂದೇ ಮನೆನಲ್ಲಿ ವಾಸಿಸುತ್ತಿದ್ದರು. ಆತ್ಮೀಯತೆಯಿಂದ ಪರಸ್ಪರ ಮೊಬೈಲ್ ಪಾಸ್‌ವರ್ಡ್‌ಗಳನ್ನು ಹಂಚಿಕೊಂಡಿದ್ದರು. ಮಾರ್ಚ್ 6ರಂದು ರಾತ್ರಿ ಇಬ್ಬರೂ ಪಾರ್ಟಿ ಮಾಡಿದ ಬಳಿಕ, ಚಿಂತನ್ ಮಲಗುವ ಮುನ್ನ ತನ್ನ ಫೋನ್ ಪಾಸ್‌ವರ್ಡ್ ಅನ್ನು ನವೀನ್‌ಗೆ ತಿಳಿಸಿದ್ದಾನೆ.
ಇದನ್ನೂ ಓದಿ:
ಆದರೆ, ಬೆಳಗ್ಗೆ ಎದ್ದು ನೋಡಿದಾಗ ನವೀನ್ ಕಾಣೆಯಾಗಿದ್ದ. ನಂತರ ಫೋನ್ ಪರಿಶೀಲಿಸಿದಾಗ, ಸುಮಾರು 4.45 ಲಕ್ಷ ರೂ. ಮೌಲ್ಯದ ಆನ್‌ಲೈನ್ ಖರೀದಿ ಮಾಡಿರುವುದು ತಿಳಿದುಬಂದಿದೆ. ವಿವಿಧ ಐಷಾರಾಮಿ ವಸ್ತುಗಳನ್ನು ಆರ್ಡರ್ ಮಾಡಿರುವುದರ ಜೊತೆಗೆ ಉಳಿದ ಹಣವನ್ನು ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸ್ನೇಹಿತನ ಈ ದ್ರೋಹದಿಂದ ಬೆಚ್ಚಿಬಿದ್ದ ಚಿಂತನ್, ಕೋರಮಂಗಲ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಆರೋಪಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.



