August 30, 2026
Sunday, August 30, 2026
spot_img

ಬೆಲೆ ಕಳೆದುಕೊಂಡ ಕೆಂಪು ಸುಂದರಿ: ಟೊಮ್ಯಾಟೋ ಬೆಳೆದ ರೈತರ ಗೋಳು ಕೇಳೋರ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವೇ ದಿನಗಳಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಸಂಭವಿಸಿದ ಭಾರೀ ಬದಲಾವಣೆ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಒಂದು ವಾರದ ಹಿಂದೆ ಉತ್ತಮ ದರ ನೀಡುತ್ತಿದ್ದ ಮಾರುಕಟ್ಟೆ, ಈಗ ತೀರಾ ಕಡಿಮೆ ಬೆಲೆ ನೀಡುತ್ತಿರುವುದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ವಾರ ಸಾವಿರ ರೂಪಾಯಿಗೂ ಹೆಚ್ಚು ಇದ್ದ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ ಈಗ 80 ರಿಂದ 100 ರೂಪಾಯಿಗೆ ಇಳಿದಿದೆ. ಹೊಸಪೇಟೆ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ 20 ರೂಪಾಯಿಗೆ 2 ರಿಂದ 4 ಕೆಜಿ ಟೊಮ್ಯಾಟೋ ಮಾರಾಟವಾಗುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.

ಇದನ್ನೂ ಓದಿ:

ಬೆಳೆ ಬೆಳೆಸಲು ಹಾಕಿದ ಖರ್ಚು, ಕೂಲಿ ಹಾಗೂ ಸಾರಿಗೆ ವೆಚ್ಚವನ್ನೂ ವಾಪಸು ಪಡೆಯಲು ಸಾಧ್ಯವಾಗುತ್ತಿಲ್ಲ. ಸಾಲ ಮಾಡಿಕೊಂಡು ಮಾರುಕಟ್ಟೆಗೆ ಬರುತ್ತಿರುವ ರೈತರು, ಬೆಲೆ ಕುಸಿತದಿಂದ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಬೆಲೆ ಏರಿಕೆಯಾಗಿದ್ದಾಗ ಫಸಲು ಸಿಗಲಿಲ್ಲ, ಈಗ ಫಸಲು ಬಂದಾಗ ಬೆಲೆ ಇಲ್ಲ ಎಂಬ ದುರಂತ ಪರಿಸ್ಥಿತಿ ಎದುರಾಗಿದೆ ಎಂದು ರೈತರು ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !