Wednesday, January 14, 2026
Wednesday, January 14, 2026
spot_img

HEALTH | ನಿಮ್ಮ ದೇಹ ನಿಮಗೇ ಇಷ್ಟವಾಗ್ತಿಲ್ವಾ? ತೂಕ ಇಳಿಸೋ ಮುನ್ನ ಇದನ್ನು ಓದಿ ಸಮಾಧಾನ ಆದೀತು

ನನ್ನ ದೇಹ ನನಗಿಷ್ಟ ಎನ್ನುತ್ತಿದ್ದ ನಿಮಗೆ ಇದ್ದಕ್ಕಿದ್ದಂತೆಯೇ ನಾನ್ಯಾಕೆ ಇಷ್ಟು ದಪ್ಪ ಆದೆ? ಈಗ ಸಣ್ಣ ಆಗೋದು ಹೇಗೆ? ಯಾವ ರೋಗವೂ ನನ್ನ ಬಳಿ ಬರೋದು ಬೇಡ ಅನಿಸುತ್ತಿದ್ದರೆ ತೂಕ ಇಳಿಸುತ್ತೇನೆಂದು ಮನಸ್ಸು ಮಾಡಿ. ಜನರ ಮಾತಿಂದ ತಪ್ಪಿಸಿಕೊಳ್ಳೋಕಲ್ಲ, ನಿಮ್ಮ ನಾಳೆಗಾಗಿ ಆರೋಗ್ಯವಾಗಿರೋದಕ್ಕೆ.

ತೂಕ ಇಳಿಯುತ್ತಿಲ್ಲ ಎಂದು ಬೇಸರವಾಗಿ ಇನ್ನಷ್ಟು ತಿನ್ನಬೇಡಿ, ಇದನ್ನು ಓದಿ ಸಮಾಧಾನವಾದೀತು..

ಈಗ ನೀವು ಇರುವಷ್ಟು ದಪ್ಪ ಆಗಿರೋದು ಒಂದೇ ದಿನದಲ್ಲಿ ಅಲ್ಲ! ಅಂತೆಯೇ ತೂಕ ಇಳಿಸೋದಕ್ಕೂ ಒಂದು ದಿನದಲ್ಲಿ ಸಾಧ್ಯ ಇಲ್ಲ. ತಾಳ್ಮೆ ಇರಲಿ.

ನಿಮ್ಮ ದೇಹ ಇಷ್ಟ ಇಲ್ಲದೆ ಅದನ್ನು ಸಣ್ಣ ಮಾಡೋಕೆ ವರ್ಕೌಟ್‌ ಮಾಡಬೇಡಿ, ನಿಮ್ಮ ದೇಹವನ್ನು ಇಷ್ಟಪಟ್ಟು ಅದಕ್ಕಾಗಿ ವರ್ಕೌಟ್‌ ಮಾಡಿ.

ನಿಮ್ಮದೇಹದಲ್ಲಿ ಬದಲಾವಣೆ ಕಾಣೋಕೆ ನಾಲ್ಕು ವಾರಗಳು ಬೇಕು, ನಿಮ್ಮ ಫ್ಯಾಮಿಲಿ ನಿಮ್ಮನ್ನು ನೊಟೀಸ್‌ ಮಾಡೋಕೆ ಎಂಟು ವಾರಗಳು, ಹೊರಗಿನ ಜಗತ್ತು ನಿಮ್ಮನ್ನು ನೊಟೀಸ್‌ ಮಾಡೋಕೆ ಹನ್ನೆರಡು ವಾರ ಬೇಕು ತಾಳ್ಮೆ ಇರಲಿ.

ಇಂದು ನೀವು ಪಡುತ್ತಿರುವ ಕಷ್ಟ ಮುಂದೊಂದು ದಿನ ನಿಮಗೇ ಗೊತ್ತಿಲ್ಲದಷ್ಟು ದೊಡ್ಡ ಗಿಫ್ಟ್‌ ನೀಡುತ್ತದೆ.

ಫ್ಯಾಟ್‌ ಲಾಸ್‌ ಬರೀ ಫಿಸಿಕಲ್‌ ಚಾಲೆಂಜ್‌ ಅಲ್ಲ ಮೆಂಟಲ್‌ ಚಾಲೆಂಜ್‌.

ತೂಕ ಇಳಿಸೋದು ನಿಮ್ಮ ದೇಹವನ್ನಷ್ಟೆ ಬದಲಾವಣೆ ಮಾಡೋದಿಲ್ಲ, ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಸೆಲ್ಫ್‌ ಕೇರ್‌ ಸೆಲ್ಫಿಶ್‌ ಅಲ್ಲ, ಅದು ಅಗತ್ಯ ಕ್ರಮ.

ಎಷ್ಟು ನಿಧಾನವಾಗಿ ತೂಕ ಇಳಿತಿದೆ ಅನ್ನೋದು ಮುಖ್ಯ ಅಲ್ಲ, ನೀವು ಪ್ರಯತ್ನ ನಿಲ್ಲಿಸುತ್ತಿಲ್ಲ ಅನ್ನೋದು ಮುಖ್ಯ.

Most Read

error: Content is protected !!