ಲೈಫ್ ಯಾವಾಗ್ಲೂ ಫೇರ್ ಅಲ್ಲ, ಯಾವಾಗ್ಲೂ ಬಿಡಿ ಹೆಚ್ಚಿನ ಸಮಯ ಫೇರ್ ಇರೋದೇ ಇಲ್ಲ. ನಾವು ಅಂದುಕೊಂಡಂತೆ, ನಾವು ಡಿಸರ್ವ್ ಮಾಡುವ ಯಾವ ವಿಷಯ, ವಸ್ತು ನಮಗೆ ಸಿಕ್ಕಿರೋದಿಲ್ಲ. ಜೀವನದ ಮೇಲೆ ಒಂಥರಾ ಸಿಟ್ಟು, ಅವಕಾಶ ನೀಡದ ಜನರ ಮೇಲೆ ಹತಾಶೆ, ದ್ವೇಷ ಸಾಧಿಸುವ ಗುರಿ ಸದಾ ಇದ್ದದ್ದೇ. ಬಟ್ ದ್ವೇಷ ಸಾಧಿಸಿದ ನಂತರ? ವಾಟ್ ನೆಕ್ಸ್ಟ್? ನೀವೊಂದು ಮಾಡ್ತೀರಿ, ಅವರೊಂದು ಮಾಡ್ತಾರೆ, ಮತ್ತೆ ನೀವೊಂದು ಮಾಡ್ತೀರಿ, ಅವರೊಂದು ಮಾಡ್ತಾರೆ. ಈ ಪ್ರೊಸೆಸ್ ನಡೆಯುತ್ತಲೇ ಇರುತ್ತದೆ. ಇಬ್ಬರು ಬೀದಿಗೆ ಬೀಳುತ್ತೀರಿ,ಇಷ್ಟಪಟ್ಟದ್ದು, ಇಷ್ಟದವರನ್ನು ಹಾಗೂ ಹಣ ಎಲ್ಲವನ್ನೂ ಕಳೆದುಕೊಳ್ತೀರಿ.. ಯಾರಾದರೂ ಒಬ್ಬರು ಸ್ಟಾಪ್ ಮಾಡಲೇಬೇಕಲ್ವಾ? ಅದು ನೀವೇ ಆಗಿರಿ..
ಸಿಟ್ಟು ಬಂದಿದೆ, ರಿವೇಂಜ್ ತಗೋಬೇಕು ಎನಿಸಿದಾಗ ಹೀಗೆ ಮಾಡಿ..
ಕಷ್ಟವಾಗಬಹುದು ಬಟ್ ಅವರ ಜಾಗದಲ್ಲಿ ನಿಂತು ಯೋಚಿಸಿ, ಅವರ್ಯಾಕೆ ಹೀಗೆ ಆಡ್ತಿದ್ದಾರೆ, ಅವರ ಸಮಸ್ಯೆ ಏನಿರಬಹುದು? ಆಲೋಚಿಸಿ..
ಆ ವ್ಯಕ್ತಿಯಿಂದ ದೂರ ಇದ್ದು, ನಿಮ್ಮ ಬೆಸ್ಟ್ ಲೈಫ್ ಲೀಡ್ ಮಾಡಿದರೆ ಆಯ್ತು. ಅದಕ್ಕಿಂತ ಬೆಸ್ಟ್ ರಿವೇಂಜ್ ಇನ್ನೆಲ್ಲಿದೆ?
ಬೆಸ್ಟ್ ರಿವೇಂಜ್ ಈಸ್ ನೋ ರಿವೇಂಜ್!! ನಿಮ್ಮ ದಾರಿ ನೀವು ನೋಡ್ಕೊಳಿ, ಸಕ್ಸಸ್‌ನಿಂದ ಜನರ ಈಗೋಗೆ ಪೆಟ್ಟು ಕೊಡಿ.
ಆ ವ್ಯಕ್ತಿಗೆ ಹೇಳಬೇಕಾದ ಎಲ್ಲ ವಿಷಯಗಳನ್ನು ಬರೆದು ಆ ಹಾಳೆ ಹರಿದುಬಿಡಿ. ನೆನಪುಗಳನ್ನು ಮೆಲುಕು ಹಾಕದಿರಿ.
ಇನ್ನೂ ಸಮಸ್ಯೆ ಎನಿಸಿದರೆ ವೈದ್ಯರನ್ನು ಭೇಟಿ ಮಾಡಿ, ಮುಕ್ತವಾಗಿ ಮಾತನಾಡಿ, ನಿಮ್ಮೊಳಗಿನ ತಾಳ್ಮೆಯನ್ನು, ಶಾಂತಿಯನ್ನು ಕಾಪಾಡಿ