ಹೊಸದಿಗಂತ ವರದಿ ಶಿವಮೊಗ್ಗ:
ಖಾಸಗಿ ಶಾಲೆಗಳಲ್ಲಿ ನಾಡಗೀತೆ ಬೇಡ ಅಂದರೆ ಆಜಾನ್ ಕೂಗುಸ್ತಾರಾ? ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇದು ರಾಜ್ಯ ಸರ್ಕಾರ ಮಾಡಿರುವ ಅಕ್ಷಮ್ಯ ಅಪರಾಧ. ಸರ್ಕಾರ ಬದಲಾಗುತ್ತಾ ಇರುತ್ತದೆ. ಹಾಗಂತ ಇರುವ ಪದ್ಧತಿಗಳನ್ನು ಬದಲಾಯಿಸುತ್ತಾ ಹೋಗುವುದು ಸರಿಯಲ್ಲ. ಮುಂದೆ ರಾಷ್ಟ್ರಗೀತೆ ಬೇಡ ಅಂತಾರೆ. ಇದು ಕುವೆಂಪು ಅವರಿಗೆ ಮಾಡಿದ ಘೋರ ಅಪಮಾನ. ಸರ್ಕಾರಕ್ಕೆ ಏನು ಬೇಕು ಹಾಗಾದರೆ? ರಾಜ್ಯದಲ್ಲಿ ಅಂಧಾ ದರ್ಬಾರ್ ನಡೀತಾ ಇದೆ. ರಾಜ್ಯದ ಜನ ಕ್ಷಮಿಸೋಲ್ಲ ಎಂದು ಎಚ್ಚರಿಸಿದರು.