DOU YOU KNOW | ಸಾವಿನ ನಂತ್ರ ದೇಹದಲ್ಲಿರೋ ರಕ್ತ ಏನಾಗುತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಮಾನವ ಶರೀರಕ್ಕೆ ಮರಣವೂ ಒಂದು ನೈಸರ್ಗಿಕ ಪ್ರಕ್ರಿಯೆ. ಮರಣದ ನಂತರ ಶರೀರದಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತವೆ. ಈ ಬದಲಾವಣೆಗಳಲ್ಲಿ ಪ್ರಮುಖವಾದದ್ದು ರಕ್ತದ ಸ್ಥಿತಿಯಲ್ಲಿ ಸಂಭವಿಸುವ ಬದಲಾವಣೆ. ಜೀವಂತ ಸ್ಥಿತಿಯಲ್ಲಿ ರಕ್ತ ನಿರಂತರವಾಗಿ ಹೃದಯದಿಂದ ಪಂಪ್ ಆಗುತ್ತಾ, ಶರೀರದ ಎಲ್ಲ ಭಾಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸರಬರಾಜು ಮಾಡುತ್ತದೆ. ಆದರೆ ಮರಣದ ನಂತರ ಹೃದಯದ ಸ್ಪಂದನ ನಿಲ್ಲುತ್ತದರಿಂದ ರಕ್ತದ ಚಲನವಲನ ಸಂಪೂರ್ಣವಾಗಿ ನಿಲ್ಲುತ್ತದೆ.

ಸಾಮಾನ್ಯವಾಗಿ ಮನುಷ್ಯನ ದೇಹವು ಸುಮಾರು 37 ಡಿಗ್ರಿ ಸೆಲ್ಸಿಯಸ್ ಅಂದರೆ 98.6 ಡಿಗ್ರಿ ಫ್ಯಾರನ್‌ಹೀಟ್ ನಲ್ಲಿರುತ್ತದೆ. ಆದರೆ ಹೃದಯ ಬಡಿತ ನಿಂತಾಗ ದೇಹ ತಣ್ಣಗಾಗುತ್ತದೆ. ಸತ್ತ 3 ಗಂಟೆಗಳ ನಂತರ, ದೇಹದ ಸ್ನಾಯುಗಳು ಬಿಗಿಯಾಗಲು ಪ್ರಾರಂಭಿಸುತ್ತವೆ. 12 ಗಂಟೆಗಳ ನಂತರ ದೇಹವು ಸಂಪೂರ್ಣವಾಗಿ ಗಟ್ಟಿಯಾಗುತ್ತದೆ.

ಸಂಚಾರ ನಿಲ್ಲುವಿಕೆ: ಮರಣವಾದ ಕೂಡಲೆ ಹೃದಯದ ಪಂಪಿಂಗ್ ನಿಲ್ಲುತ್ತದೆ. ಇದರಿಂದ ರಕ್ತದ ಸಂಚಾರ ಸಂಪೂರ್ಣವಾಗಿ ನಿಲ್ಲುತ್ತದೆ.

ಗುರುತ್ವಾಕರ್ಷಣ ಪರಿಣಾಮ: ರಕ್ತ ಎಳೆಯುವ ಶಕ್ತಿ ಇಲ್ಲದ ಕಾರಣ, ಶರೀರದ ತಳಭಾಗಗಳಲ್ಲಿ ರಕ್ತ ಕೆಂದ್ರೀಕೃತವಾಗುತ್ತೆ. ಇದನ್ನು livor mortis (ಮರಣದ ಚಿಹ್ನೆ) ಅಥವಾ postmortem hypostasis ಎಂದೂ ಕರೆಯುತ್ತಾರೆ. ಇದರಲ್ಲಿ ತ್ವಚೆಯು ನಿಲಿಗುಲಾಬಿ ಬಣ್ಣಕ್ಕೆ ತಿರುಗುತ್ತದೆ.

ಕ್ಲಾಟಿಂಗ್ (Clotting): ಕೆಲವೇ ಗಂಟೆಗಳಲ್ಲಿ ರಕ್ತ ಗಟ್ಟಿಯಾಗಿಹೋಗುತ್ತದೆ (coagulation). ಇದು ಶರೀರದಲ್ಲಿ ಬ್ಲಡ್ ಕ್ಲಾಟ್‌ಗಳ ರೂಪದಲ್ಲಿ ಕಂಡುಬರುತ್ತದೆ.

ಬಾಕ್ಟೀರಿಯಾ ಕ್ರಿಯೆ: ಕೆಲವು ದಿನಗಳ ನಂತರ ಶರೀರದ ಅವಯವಗಳು ವಿಲೀನಗೊಳ್ಳುತ್ತವೆ. ಇದರಲ್ಲಿ ರಕ್ತವೂ ಒಳಗೊಂಡಿದ್ದು, ಬ್ಯಾಕ್ಟೀರಿಯಾಗಳು ರಕ್ತವನ್ನು ಜಮೆ ಮಾಡುಲು ಪ್ರಾರಂಭಿಸುತ್ತವೆ. ಇದು ಶವದ ದುರ್ಗಂಧಕ್ಕೆ ಕಾರಣವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!