ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಮೀನುಗಾರ ಸಮುದಾಯಕ್ಕೆ ಬಂಪರ್ ಕೊಡುಗೆ ನೀಡಿದೆ. ಮೀನುಗಾರಿಕೆ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಆರ್ಥಿಕವಾಗಿ ಉತ್ತೇಜಿಸಲು, ಈ ಹಿಂದೆ ನೀಡಲಾಗುತ್ತಿದ್ದ ಉಚಿತ ‘ಮೀನುಗಾರಿಕೆ ಸಲಕರಣೆ ಕಿಟ್’ಗಳ ಮೌಲ್ಯವನ್ನು ದ್ವಿಗುಣಗೊಳಿಸಲಾಗಿದೆ.
ಈ ಹಿಂದೆ ₹10,000 ಇದ್ದ ಕಿಟ್ ಮೌಲ್ಯವನ್ನು ಈಗ ₹20,000 ಕ್ಕೆ ಏರಿಸಲಾಗಿದೆ.
ಮೀನುಗಾರರಿಗೆ ಸುಧಾರಿತ ತಂತ್ರಜ್ಞಾನದ ಉಪಕರಣಗಳನ್ನು ಒದಗಿಸುವುದು ಮತ್ತು ಅವರ ದೈನಂದಿನ ಕಾಯಕಕ್ಕೆ ಬೆಂಬಲ ನೀಡುವುದು.
ಈ ಕಿಟ್ ಅನ್ನು ಅರ್ಹ ಮೀನುಗಾರರಿಗೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.



