July 10, 2026
Friday, July 10, 2026
spot_img

ಓವರ್‌ ಆಲ್‌ ನಮ್ಮ ಬೆಂಗಳೂರಿಗೆ ಈ ಬಜೆಟ್‌ನಿಂದ ಸಿಕ್ಕಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ಕರ್ನಾಟಕ ಬಜೆಟ್ 2026ರಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಾಕಷ್ಟು ಕೊಡುಗೆ ಸಿಕ್ಕಿದೆ. ಬೆಂಗಳೂರು ಜನರು ನಿರೀಕ್ಷೆ ಮಾಡಿದ್ದ ಹಲವು ಅಂಶಗಳು ಬಜೆಟ್‌ನಲ್ಲಿ ಸೇರಿವೆ. ಬೆಂಗಳೂರಿನ ಮೂಲಸೌಕರ್ಯವನ್ನು ಹೆಚ್ಚಳಕ್ಕೆ ಬಜೆಟ್ ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಯಾವೆಲ್ಲಾ ಘೋಷಣೆ?

ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಸೌಕರ್ಯವನ್ನು ಹೆಚ್ಚಿಸಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 7,000 ಕೋಟಿ ರೂ.ಗಳನ್ನು ಹಂಚಿಕೆ ಮಾಡುವುದಾಗಿ ಘೋಷಿಸಿದರು. ಕಳೆದ ವರ್ಷವೂ ಇಷ್ಟೇ ಮೊತ್ತವನ್ನು ನೀಡಲಾಗಿತ್ತು.

ಮುಖ್ಯಾಂಶಗಳು ಇಲ್ಲಿವೆ..
ವೈಟ್‌ ಟಾಪಿಂಗ್‌ ಮಾಡೋದಕ್ಕೆ 3,500 ಕೋಟಿ ರೂ.

ಮಳೆ ಹಾಗೂ ಪ್ರವಾಹ ನಿರ್ವಹಣೆಗೆ 5 ವರ್ಷಗಳ ಅವಧಿಯಲ್ಲಿ 5000 ಕೋಟಿ ರೂ.

ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಸುರಂಗ ಯೋಜನೆಗೆ 2,250 ಕೋಟಿ ರೂ.

ಬೆಂಗಳೂರು ಅಭಿವೃದ್ಧಿಗಾಗಿ ಜಿಬಿಎಗೆ ಪ್ರತೀ ವರ್ಷದಂತೆ 7,000 ಕೋಟಿ ರೂ.

ಹೆಚ್ಚುವರಿ ನೀರಿನ ಸಂಸ್ಕರಣಾ ಘಟಕಕ್ಕೆ 650 ಕೋಟಿ ರೂ.

ನಗರಕ್ಕೆ ಹೆಚ್ಚುವರಿ ನೀರು ಪೂರೈಕೆಗೆ ಕ್ರಮಕ್ಕಾಗಿ 6,939 ಕೋಟಿ ರೂ. ಮೀಸಲಿಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !