January16, 2026
Friday, January 16, 2026
spot_img

ಡಬಲ್ ಹಾಫ್ ಸೆಂಚುರಿ ಪವರ್! ಕೊಹ್ಲಿ-ರುತುರಾಜ್ ಅಬ್ಬರಕ್ಕೆ ದ.ಆಫ್ರಿಕಾ ತಬ್ಬಿಬ್ಬು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಹೈ-ವೋಲ್ಟೇಜ್ ಪಂದ್ಯವು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಿರುಸಿನಿಂದ ಸಾಗುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಇಳಿದರೂ, ಆರಂಭಿಕ ಆಘಾತದಿಂದ ಬೇಗನೆ ಚೇತರಿಸಿಕೊಂಡಿತು.

ತಂಡದ ಪರವಾಗಿ ಮೈಲುಗಲ್ಲಿನ ಪ್ರದರ್ಶನ ನೀಡಿದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೋಡಿಯು ಅಮೋಘ ಶತಕದ ಜೊತೆಯಾಟದ ಮೂಲಕ ತಂಡವನ್ನು 200 ರನ್ ಗಡಿ ದಾಟಿಸಿದೆ. ಈ ಇಬ್ಬರೂ ತಲಾ ಅರ್ಧಶತಕ ಸಿಡಿಸಿ, ಟೀಮ್ ಇಂಡಿಯಾ ಬೃಹತ್ ಮೊತ್ತದತ್ತ ಸಾಗಲು ಭದ್ರ ಬುನಾದಿ ಹಾಕಿದ್ದಾರೆ.

ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಕೇವಲ 52 ಎಸೆತಗಳಲ್ಲಿ ತಮ್ಮ ಎರಡನೇ ಏಕದಿನ ಅರ್ಧಶತಕವನ್ನು ಪೂರೈಸುವ ಮೂಲಕ ತಮ್ಮ ಉತ್ತಮ ಫಾರ್ಮ್ ಮುಂದುವರೆಸಿದರು.

ರುತುರಾಜ್ ನಂತರ ಬ್ಯಾಟ್ ಹಿಡಿದ ‘ಕಿಂಗ್’ ವಿರಾಟ್ ಕೊಹ್ಲಿ ಕೇವಲ 47 ಎಸೆತಗಳಲ್ಲಿ ತಮ್ಮ 76ನೇ ಏಕದಿನ ಅರ್ಧಶತಕವನ್ನು ಪೂರ್ಣಗೊಳಿಸಿ ಅಬ್ಬರಿಸಿದರು. ಪ್ರಸ್ತುತ ಅತ್ಯುತ್ತಮ ಲಯದಲ್ಲಿರುವ ಕೊಹ್ಲಿಗೆ ಇದು ಸತತ ಮೂರನೇ 50+ ಸ್ಕೋರ್ ಆಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

ಕೊಹ್ಲಿ ಮತ್ತು ಗಾಯಕ್ವಾಡ್ ನಡುವಿನ ಈ ಮಹತ್ವದ ಜೊತೆಯಾಟವು ಭಾರತದ ಇನ್ನಿಂಗ್ಸ್‌ಗೆ ಹೊಸ ಜೀವ ತುಂಬಿದ್ದು, ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸವಾಲಿನ ಮೊತ್ತ ನೀಡುವ ನಿರೀಕ್ಷೆಯಿದೆ.

Must Read

error: Content is protected !!