ಹೊಸದಿಗಂತ ವರದಿ ಮೈಸೂರು:
ಜಿಲ್ಲೆಯ ಹುಣಸೂರಿನ ಸಾ ಮಿಲ್ ನಲ್ಲಿ ದುಷ್ಕರ್ಮಿಗಳು ಇಬ್ಬರನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ನಾಲ್ಕು ವರ್ಷಗಳಿಂದ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಹಾಗೂ ಶಣ್ಮುಗ ಎಂಬುವರನ್ನ ಮಧ್ಯರಾತ್ರಿ ವೇಳೆ ಹುಣಸೂರಿನ ಪರಸಯ್ಯನ ಛತ್ರ ಬಳಿ ಇರುವ ಎಸ್.ಎಸ್.ಸಾಮಿಲ್ ನಲ್ಲಿ ಕೊಲೆ ಮಾಡಲಾಗಿದೆ.
ಪ್ರತಿದಿನ ಮುಂಜಾನೆ 6 ಗಂಟೆಗೆ ವೆಂಕಟೇಶ್ ಸಾಮಿಲ್ ನಿಂದ ಹೊರಗೆ ಬರುತ್ತಿದ್ದರು. ಇಂದು 7 ಗಂಟೆ ಆದ್ರೂ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ನೆರೆ ಮನೆಯವರು ಮಾಲೀಕರಿಗೆ ವಿಚಾರ ಮುಟ್ಟಿಸಿದ್ದಾರೆ. ಮಾಲೀಕರು ಸ್ಥಳಕ್ಕೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮೃತ ಷಣ್ಮುಗ ಮಾನಸಿಕ ಅಸ್ವಸ್ಥನಾಗಿದ್ದನೆಂದು ಹೇಳಲಾಗಿದೆ. ಸಾಮಿಲ್ ನಲ್ಲಿ ಸಿಗುವ ಸೌದೆಗಳನ್ನ ಮಾರಿಕೊಂಡು ಜೀವನ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಅಡಿಷನಲ್ ಎಸ್ಪಿ ನಂದಿನಿ ಹಾಗೂ ಡಿವೈಎಸ್ಪಿ ಭೇಟಿ ನೀಡಿದ್ದಾರೆ. ಹುಣಸೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.