ಇನ್ಮುಂದೆ RCBಯಲ್ಲಿ ‘KGF’ ಜೋಡಿ ಕಾಣೋದು ಡೌಟ್?! ಇದು ಹೊಸ ಅಧ್ಯಾಯ ಶುರು ಮಾಡೋ ಟೈಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18 ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಿಂದ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ರಿಲೀಸ್ ಆಗಲಿದ್ದಾರೆ ಎಂದು ವರದಿಯಾಗಿದೆ.

ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ KGF ಜೋಡಿ ಬೇರ್ಪಡುವುದು ಬಹುತೇಕ ಖಚಿತವಾದಂತಾಗಿದೆ. ಇದೀಗ ತ್ರಿವಳಿ ಗುಂಪಿನಿಂದ ಇಬ್ಬರು ಆಟಗಾರರು ಹೊರಬೀಳುವ ಸುದ್ದಿ ಹೊರಬಿದ್ದಿದೆ.

ಇದಾಗ್ಯೂ ಫಾಫ್ ಡುಪ್ಲೆಸಿಸ್ ಅವರನ್ನು ಆರ್​ಸಿಬಿ ಉಳಿಸಿಕೊಳ್ಳದಿರಲು ಮುಖ್ಯ ಕಾರಣ ಅವರ ವಯಸ್ಸು. ಈಗಾಗಲೇ 40 ವರ್ಷ ದಾಟಿರುವ ಅವರು ಮುಂಬರುವ ಸೀಸನ್​ಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಆರ್​ಸಿಬಿ ಬದಲಿ ನಾಯಕನನ್ನು ರೂಪಿಸಿಕೊಳ್ಳಬೇಕಿದೆ. ಹೀಗಾಗಿಯೇ ಫಾಫ್ ಡುಪ್ಲೆಸಿಸ್ ಅವರನ್ನು ಕೈ ಬಿಡಲು ಆರ್​ಸಿಬಿ ನಿರ್ಧರಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!