ಡಾ. ಅಜಯ್ ಸಿಂಗ್ ಗೆ ಮೂರನೇ ಬಾರಿ ಕೈತಪ್ಪಿದ ಮಂತ್ರಿ ಸ್ಥಾನ !

ಹೊಸ ದಿಗಂತ ವರದಿ, ಕಲಬುರಗಿ:

ಮಾಜಿ ಸಿಎಂ ಧರ್ಮಸಿಂಗ್ ಪುತ್ರ ಶಾಸಕ ಡಾ. ಅಜಯ್ ಸಿಂಗ್ ಗೆ ಮತ್ತೊಮ್ಮೆ ಮಂತ್ರಿ ಸ್ಥಾನ ಕೈತಪ್ಪಿ ಹೋಗಿದ್ದು, ಮೂರು ಬಾರಿ ಗೆದ್ದರೂ ಮಂತ್ರಿ ಭಾಗ್ಯ ಒಲಿಯದೆ ಅಭಿಮಾನಿ ಬಳಗಕ್ಕೆ ಬಾರಿ ನಿರಾಸೆ ಮೂಡಿಸಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದಿಂದ ಸತತ ಮೂರುಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ರೂ ಸಚಿವ ಸ್ಥಾನ ಮಾತ್ರ ಕೈಗೆಟುಕುತ್ತಿಲ್ಲ, ಕಲಬುರಗಿ ಜಿಲ್ಲೆಯವರಾದ ಇಬ್ಬರು‌ ವೈದ್ಯರ ಮದ್ಯೆ ಸಚಿವ ಸ್ಥಾನದ ರೆಸ್ ಏರ್ಪಟ್ಟಿತ್ತು. ಆದ್ರೆ ಸಿಎಂ ಸಿದ್ದರಾಮಯ್ಯ ಆಪ್ತರಾಗಿರೋ ಡಾ. ಅಜಯ್ ಸಿಂಗ್ ಬದಲಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರಾಗಿರುವ ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ್ ಗೆ ಮಂತ್ರಿಗಿರಿ ಒಲಿದು ಬಂದಿದೆ.

ಎಐಸಿಸಿ‌ ಅಧ್ಯಕ್ಷ ಖರ್ಗೆ ಪುತ್ರ ಸಚಿವ ಪ್ರೀಯಾಂಕ್ ಖರ್ಗೆ‌ ಮತ್ತು‌ ಅಜಯ್ ಸಿಂಗ್ ಒಟ್ಟಿಗೆ ರಾಜಕೀಯ ಪ್ರವೇಶ ಮಾಡಿದ್ದಾರೆ. ಇಬ್ಬರು ಮೂರುಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದಾರೆ. ಆದ್ರೆ ಪ್ರೀಯಾಂಕ ಖರ್ಗೆ ಮೂರು ಬಾರಿ ಮಂತ್ರಿಯಾದ್ರೆ ಅಜಯ್ ಸಿಂಗ್ ಗೆ ಒಂದು ಬಾರಿಯೂ ಸಚಿವ ಸ್ಥಾನ ಒಲಿಯದಿರುವದು ಕ್ಷೇತ್ರದ ಜನತೆಗೆ‌ ಬಾರಿ‌ ನಿರಾಸೆ ತಂದಿದೆ. ಕಳೆದ ಬಾರಿಯೇ ಮಂತ್ರಿ ಆಗಬಹುದು‌ ಎಂಬ ನೀರಿಕ್ಷೆ ಇತ್ತು ಕೊನೆಗೆ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ನೇಮಕ ಮಾಡಲಾಗಿತ್ತು‌. ಈ ಬಾರಿ‌ ಖಂಡಿತ ಸಚಿವರಾಗ್ತಾರೆ ಅನ್ನೋ ಬೆಂಬಲಿಗರ ಕನಸ್ಸು ಮತ್ತೆ ನುಚ್ಚು ನೂರಾಗಿದೆ.

ಜೇವರ್ಗಿಯ ಶಾಸಕ ಅಜಯಸಿಂಗ್ ನೂತನ ಸರ್ಕಾರದಲ್ಲಿ ಮಂತ್ರಿಯಾಗಲಿ ಎಂದು ಪ್ರಾರ್ಥಿಸಿ ಶಕ್ತಿಯ ದೈವ ಎಂದು ಕರೆಸಿಕೊಳ್ಳುವ ಜೇವರ್ಗಿ ತಾಲೂಕಿನ ನೇಲೋಗಿ ಗ್ರಾಮದ ಬಲಭೀಮೇಶ್ವರ ದೇವಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಅದ್ರೆ‌ ಭಕ್ತರ ಪ್ರಾಥನೆ ದೇವರಿಗೆ ತಲುಪಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!