ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕನ್ನಡಿಗರಿಗೆ ದೇಶ ವಿದೇಶವನ್ನು ತೋರಿಸೋ ಡಾ.ಬ್ರೋ. ಇವರ ನಿರೂಪಣೆ ಶೈಲಿಗೆ ಕನ್ನಡಿಗರೆಲ್ಲರೂ ಫಿದಾ ಆಗಿದ್ದಾರೆ. ಇವರ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಿದ ಒಂದು ವಿಡಿಯೋ ಕ್ಷಣ ಮಾತ್ರದಲ್ಲಿ ಲಕ್ಷಗಟ್ಟಲೆ ವೀವ್ಸ್ ಗಿಟ್ಟಿಸಿಕೊಳ್ಳುತ್ತವೆ. ನಮಸ್ಕಾರ ದೇವು.. ಅಂತ ವಿಡಿಯೋ ಶುರು ಮಾಡಿದರೆ ಮುಗಿದೇ ಹೋಯ್ತು. ಡಾ.ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಪ್ರತಿಯೊಂದು ವಿಡಿಯೋ ಕೂಡ ಯೂಟ್ಯೂಬ್‌ನಲ್ಲಿ ಅದ್ಭುತವಾಗಿ ವೀವ್ಸ್ ಅನ್ನು ಗಿಟ್ಟಿಸಿಕೊಳ್ಳುತ್ತವೆ. ಇದೇ ಯೂಟ್ಯೂಬರ್ ಈಗ ಕನ್ನಡ ಚಿತ್ರರಂಗದ ನಟರನ್ನು ಅಚಾನಕ್ ಆಗಿ ಭೇಟಿ ಮಾಡಿದ್ದಾರೆ.
ಕನ್ನಡದ ಸ್ಟಾರ್ ನಟರನ್ನು ಭೇಟಿ ಮಾಡಿದ ಖುಷಿಯನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಫೋಟೊಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.
ಎಲ್ಲರನ್ನೂ ಒಟ್ಟಾಗಿ ನೋಡಿ ಸೈಕ್ ಆದೆ
ಡಾಲಿ ಧನಂಜಯ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಡಾರ್ಲಿಂಗ್ ಕೃಷ್ಣ ಸೇರಿದಂತೆ ಹಲವು ನಟರನ್ನು ಅಚಾನಕ್ ಆಗಿ ಭೇಟಿಯಾಗಿದ್ದಾರೆ. ಈ ಸಂಬಂಧ ಫೋಟೊವನ್ನು ಶೇರ್ ಮಾಡಿಕೊಂಡಿದ್ದು, “ನನ್ ತುಂಬ ಚಿಕ್ಕಂದಿನಿಂದ ಇವರೆಲ್ಲರನ್ನು ನೋಡ್ತಿದ್ದೆ. ಇಂದು ಅಚಾನಕ್ಕಾಗಿ ಎಲ್ಲರನ್ನೂ ಒಟ್ಟಾಗಿ ನೋಡಿ ಸೈಕ್ ಆದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.