Friday, November 28, 2025

ಜ್ಞಾನ ಭಾರತಮ್ ಮಿಶನ್ ಕರ್ನಾಟಕ ರಾಜ್ಯ ಮುಖ್ಯ ಸಂಚಾಲಕರಾಗಿ ಡಾ.ಬಿ. ಗೋಪಾಲಾಚಾರ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಬೃಹದ್ಯೋಜನೆಯಾದ ಜ್ಞಾನ ಭಾರತಮ್ ಮಿಶನ್ ಗೆ ಕರ್ನಾಟಕ ರಾಜ್ಯ ಮುಖ್ಯಸಂಚಾಲಕರಾಗಿ ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಬಿ. ಗೋಪಾಲಾಚಾರ್ಯರು ಆಯ್ಕೆಯಾಗಿದ್ದಾರೆ.

ದೆಹಲಿಯ ವಿಜ್ನಾನ ಭವನದಲ್ಲಿ ನವೆಂಬರ್ 12 ರಂದು ಪ್ರಧಾನಿ ಮೋದಿ ಅವರು ಬೃಹದ್ಯೋಜನೆಯಾದ ಜ್ಞಾನ ಭಾರತಮ್ ಮಿಶನ್ ಗೆ ಚಾಲನೆ ನೀಡಿದ್ದರು.

ದೇಶ ವಿದೇಶಗಳಿಂದ ಸುಮಾರು ಒಂದು ಕೋಟಿ ಹಸ್ತಪ್ರತಿಗಳನ್ನು ಡಿಜಿಟಲ್ ಗೊಳಿಸುವ ಬಹು ವೆಚ್ಚದ ಯೋಜನೆಯನ್ನು ಸಂಸ್ಕೃತಿ ಮಂತ್ರಾಲಯದ ಅಧೀನದಲ್ಲಿ ಆಯೋಜಿಸಲಾಗುತ್ತಿದೆ. ದೇಶದ ಎಲ್ಲ ರಾಜ್ಯಗಳಿಗೆ ಮುಖ್ಯ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ಇದೀಗ ಕರ್ನಾಟಕ ರಾಜ್ಯ ಮುಖ್ಯ ಸಂಚಾಲಕರಾಗಿ ಡಾ. ಬಿ. ಗೋಪಾಲಾಚಾರ್ಯರು ಆಯ್ಕೆಯಾಗಿದ್ದಾರೆ.

error: Content is protected !!