ಹೊಸದಿಗಂತ ಡಿಜಿಟಲ್ ಡೆಸ್ಕ್:
ಭರ್ಜರಿ ವೋಟ್ಗಳೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡಾ. ಮಂಜುನಾಥ್ ಆರೋಗ್ಯ ಸಚಿವ ಖಾತೆ ಬಗ್ಗೆ ಮಾತನಾಡಿದ್ದಾರೆ.
ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿ ಆಗುತ್ತಿರುವುದು ಸಂತೋಷದ ವಿಷಯ, ಜವಾಹರ್ ಲಾಲ್ ನೆಹರು ಬಳಿಕ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿದ್ದಾರೆ. ನಾನು ಸಚಿವ ಆಗಬೇಕೆಂದು ಜನರ ನಿರೀಕ್ಷೆ ಇದೆ, ನಾನು ಈ ಬಗ್ಗೆ ಏನೂ ಕೇಳೋದಿಲ್ಲ ಎಂದಿದ್ದಾರೆ.
ಮೊದಲು ಎನ್ಡಿಎ ಸರ್ಕಾರ ರಚನೆ ಆಗಬೇಕು ಅಷ್ಟೆ. ಮೈತ್ರಿ ಸರ್ಕಾರ ಆಗಿರುವುದರಿಂದ ಅದರದ್ದೇ ಆದ ಸಮಸ್ಯೆಗಳು ಇರುತ್ತವೆ. ಸಚಿವ ಸ್ಥಾನದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಹಾಗೆಂದು, ನಾನು ಆರೋಗ್ಯ ಸಚಿವ ಆಗಬೇಕು ಎಂಬುದು ಜನರ ಅನಿಸಿಕೆಯಷ್ಟೆ ಎಂದು ಮಂಜುನಾಥ್ ಹೇಳಿದರು.