ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದ ಡಾ.ಕೆ ಸುಧಾಕರ್ಗೆ ಇಂಜೆಕ್ಷನ್ ಕೊಡೋದು ಗೊತ್ತು, ದುಡ್ಡು ಹೊಡೆಯೋದು ಗೊತ್ತು. ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಟೀಕಿಸಿದ್ದಾರೆ.
ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಸುಧಾಕರ್ ಅವರ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು. ಡಾಕ್ಟರ್ ಓದಿದ್ದಾರೋ ಇಲ್ವೋ ಗೊತ್ತಿಲ್ಲ, ಕೇಂದ್ರದಲ್ಲಿ ಸಂಸದರಾಗಿದ್ದಾರೆ. ರಸಗೊಬ್ಬರದ ವಿಚಾರವಾಗಿ ಬುಧವಾರ ಎಲ್ಲಾ ಡಿಟೇಲ್ಸ್ ಕೊಟ್ಟಿದ್ದೇನೆ. ಸಣ್ಣ ಹಿಡುವಳಿದಾರರು ಇರ್ತಾರೆ, ದೊಡ್ಡ ಹಿಡುವಳಿದಾರರು ಇರ್ತಾರೆ. ನಮಗೆ ಕೇಂದ್ರ ಸರ್ಕಾರ 1.36 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಕೊಟ್ಟಿಲ್ಲ, 2.28 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಬರಬೇಕಿತ್ತು. ಇದಕ್ಕಾಗಿ ಕೃಷಿ ಸಚಿವರಿಗೆ ಮನವಿ ಮಾಡಿದ್ದೇವೆ. ನಡ್ಡಾ ಅವರ ಭೇಟಿಗೂ ಅವಕಾಶ ಕೇಳಿದ್ದೇವೆ. ಇನ್ನೂ ಶ್ರೀಲಂಕಾವನ್ನು ಕಂಟ್ರೋಲ್ ಮಾಡೋರು ಯಾರು? ಎಲ್ಲವೂ ಕೇಂದ್ರ ಸರ್ಕಾರವೇ ತಾನೇ? ಎಂದ ವಾಗ್ದಾಳಿ ನಡೆಸಿದ್ದಾರೆ.