ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳದ ಮಂಜುನಾಥ ನಂತೆ ನಮ್ಮ ಡಾ. ಸಿಎನ್ ಮಂಜುನಾಥ್, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ 5000 ಗಿಫ್ಟ್ ಕಾರ್ಡ್ ಗಳನ್ನು ಕೊಟ್ರು ಅಂತ ನಿಖಿಲ್ ಕುಮಾರಸ್ವಾಮಿ ಅವರನ್ನ ಸೋಲಿಸಿದ್ರಿ. ದೇವರು ನಿಮ್ಮನ್ನ ಕ್ಷಮಿಸಲ್ಲ, ಪಾಪಕ್ಕೆ ಪ್ರಾಯಶ್ಚಿತ್ತ ಮಾಡ್ಕೋಬೇಕು ಅಂದ್ರೆ ಮಂಜುನಾಥ್ ಗೆ ವೋಟ್ ಹಾಕಿ ಎಂದು ಜನತೆ ಎದುರು ಮುನಿರತ್ನ ಮನವಿ ಸಲ್ಲಿಸಿದ್ದಾರೆ.
ಡಾ. ಮಂಜುನಾಥ್ ಈವರೆಗೂ 75 ಲಕ್ಷ ಆಪರೇಷನ್ ಮಾಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಸಹೋದರರ ನಾಡಿಮಿಡಿತ ಹೆಚ್ಚಿದೆ. ಹೆಂಗೋ ಗಿಫ್ಟ್ ಕಾರ್ಡ್ ಗಳನ್ನ ಕೊಟ್ಟು ಗೆಲ್ಲಬಹುದಿತ್ತು ಅಂದುಕೊಂಡಿದ್ದರು, ಆದರೆ ಡಾ. ಮಂಜುನಾಥ್ ಅವರ ಎಂಟ್ರಿಯಿಂದ ಭಯ ಶುರುವಾಗಿದೆ.
ಡಾ. ಮಂಜುನಾಥ್ ಗೆ ನೀವೆಲ್ಲ ವೋಟ್ ಹಾಕಿದ್ರೆ ದೇವಾನು ದೇವತೆಗಳು ತಥಾಸ್ತು ಅಂತಾರೆ. ಅವರಿಗೆ ವೋಟ್ ಹಾಕದಿದ್ದರೆ ಯಮ ನರಕಕ್ಕೆ ಕಳುಹಿಸ್ತಾನೆ ಎಂದು ಹೇಳಿದ್ದಾರೆ.