ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದಿಂದ ಬಂದಿರುವ ದೋಣಿಯೊಂದು ಕರ್ನಾಟಕದ ಕರಾವಳಿಯಲ್ಲಿ ಪತ್ತೆಯಾಗಿದೆ. ಚೀನಾದ ದೋಣಿಯು ಮೀನುಗಾರಿಕೆ ನಡೆಸುತ್ತಿರುವ ವಿಡಿಯೋವನ್ನು ಕರಾವಳಿಯ ಮೀನುಗಾರರು ಸೆರೆಹಿಡಿದಿದ್ದಾರೆ.
ಇನ್ನು ಮೂರು ದಿನಗಳ ಹಿಂದೆಯೆ ಚೀನಾದಿಂದ ಬಂದಿದೆ ಎಂದು ಹೇಳಲಾದ ಹಡಗು ಪತ್ತೆಯಾಗಿದ್ದು. ಇದೀಗ ರಾಜ್ಯದ ಪರ್ಸಿನ್ ಬೋಟ್ ಮೀನುಗಾರರು, ಚೀನಾದ ದೋಣಿ ಮೀನುಗಾರಿಕೆ ಮಾಡುತ್ತಿರುವ ವಿಡಿಯೋ ಸೆರೆ ಹಿಡಿದ್ದಿದ್ದಾರೆ.
ಇನ್ನು ಈ ಕುರಿತು ಕರಾವಳಿ ಕೋಸ್ಟ್ ಗಾರ್ಡ್ ಗೆ ಸೂಚನೆ ನೀಡಿದ್ದು, ಫುಲ್ ಅಲರ್ಟ್ ಆಗಿದ್ದಾರೆ.