ಕೋಚ್ ಆಗಿ ದ್ರಾವಿಡ್​ ಗೆ ನಾಳೆ ಕೊನೆಯ ಪಂದ್ಯ: ಗೆಲುವಿನ ‘ಗುರು ಕಾಣಿಕೆ’ ನೀಡುವರೇ ರೋಹಿತ್ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಟೀಂ ಇಂಡಿಯಾ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗುವ ಕನಸಿನೊಂದಿಗೆ ಟಿ20 ಫೈನಲ್‌ಗೆ ತಲುಪಿದೆ.

ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಸೋಲಿನ ನಂತರ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಚಾಂಪಿಯನ್ ಆಗುವ ಸನಿಹದಲ್ಲಿದೆ.
ಇದರ ನಡುವೆ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಕೊನೆಯ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ನಾಳಿನ ಫೈನಲ್‌ ಪಂದ್ಯ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಗೆ ಕೊನೆಯ ಪಂದ್ಯ. ಈ ಕುರಿತು ತಮ್ಮ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಟೀಂ ಇಂಡಿಯಾದ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ರಾಹುಲ್ ದ್ರಾವಿಡ್ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ರಾಹುಲ್ ದ್ರಾವಿಡ್ ತಮ್ಮ ಪ್ರಯಾಣದ ಬಗ್ಗೆ ಹಲವು ದೊಡ್ಡ ವಿಷಯಗಳನ್ನು ಹೇಳಿದ್ದಾರೆ. ‘ನಾನು ಅದನ್ನು ನಿಜವಾಗಿಯೂ ಆನಂದಿಸಿದೆ, ಇದು ನನಗೆ ಉತ್ತಮ ಕಲಿಕೆಯ ಅನುಭವವಾಗಿದೆ. ನನ್ನ ಹೊರತಾಗಿ, ನನ್ನ ಕುಟುಂಬವೂ ಕಳೆದ 2.5 ವರ್ಷಗಳಲ್ಲಿ ಭಾರತ ತಂಡದ ಭಾಗವಾಗಿ ಪ್ರಯಾಣ ಮಾಡಿದೆ ಎಂದಿದ್ದಾರೆ.

https://x.com/BCCI/status/1806651309061185904?ref_src=twsrc%5Etfw%7Ctwcamp%5Etweetembed%7Ctwterm%5E1806651309061185904%7Ctwgr%5Efb6a920300b70ba8cc1cb95834e3ef16f2bed537%7Ctwcon%5Es1_&ref_url=https%3A%2F%2Ftv9kannada.com%2Fsports%2Fcricket-news%2Frahul-dravid-statement-on-team-india-head-coach-journey-kannada-news-psr-857643.html

ಟೀಂ ಇಂಡಿಯಾಗೆ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಕೊನೆಯ ಟೂರ್ನಿ ಇದಾಗಿದೆ. ಈ ವಿಶ್ವಕಪ್ ಬಳಿಕ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಹೀಗಿರುವಾಗ ವಿಶ್ವಕಪ್ ಗೆದ್ದು ದ್ರಾವಿಡ್​ಗೆ ವಿದಾಯ ಹೇಳಬೇಕು ಎಂಬ ಕೂಗು ಜೋರಾಗಿದೆ. ಕೋಟ್ಯಂತರ ಭಾರತೀಯ ಅಭಿಮಾನಿಗಳಿಗಾಗಿ ಹಾಗೂ ರಾಹುಲ್ ದ್ರಾವಿಡ್‌ಗಾಗಿ ಟೀಂ ಇಂಡಿಯಾ ಈ ವಿಶ್ವಕಪ್ ಗೆಲ್ಲಬೇಕು ಎಂಬುದು ಹಲವು ದಿಗ್ಗಜರ ಅಭಿಪ್ರಾಯವಾಗಿದೆ.

ನವೆಂಬರ್ 2021 ರಲ್ಲಿ ರಾಹುಲ್ ದ್ರಾವಿಡ್ ಕೋಚ್ ಹುದ್ದೆಯನ್ನು ವಹಿಸಿಕೊಂಡರು. ಆದರೆ, ಇದುವರೆಗೆ ಅವರ ಕೋಚ್ ಅಡಿಯಲ್ಲಿ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಟೀಂ ಇಂಡಿಯಾ 2022 ರಲ್ಲಿ ಟಿ20 ವಿಶ್ವಕಪ್ ಸೆಮಿಫೈನಲ್, 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಏಕದಿನ ವಿಶ್ವಕಪ್‌ನ ಫೈನಲ್ ತಲುಪಿತು. ಆದರೆ ಈ ಎಲ್ಲಾ ಪಂದ್ಯಗಳಲ್ಲು ಸೋಲನ್ನು ಎದುರಿಸಬೇಕಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!