ಖಾಕಿ ವೇಷ ಧರಿಸಿ ಚಿನ್ನಾಭರಣ, ಹಣ ಪಡೆದು ಪಂಗನಾಮ: ಬಯಲಾಯ್ತು ‘ಕಿಲೇಡಿ’ ಅಸಲಿ ಮುಖ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖಾಕಿ ವೇಷ ಧರಿಸಿದ್ದ ಮಹಿಳೆಯೊಬ್ಬರು ಜನರಿಂದ ಚಿನ್ನಾಭರಣ, ಹಣ ಪಡೆದು ವಂಚಿಸಿರುವ ಘಟನೆ ಹಾಸನ ನಗರದ ವಿಜಯನಗರ ಬಡಾವಣೆ ಎರಡನೇ ಹಂತದಲ್ಲಿ ನಡೆದಿದೆ. ವಂಚಕಿಯನ್ನು ನಿವೇದಿತಾ.ಎಂ ಎಂದು ಗುರುತಿಸಲಾಗಿದೆ.

ನಾಲ್ಕು ತಿಂಗಳ ಹಿಂದೆ ಕವನ ಎಂಬಾಕೆ ಅಗಲಹಳ್ಳಿ ಗ್ರಾಮದ ಸುನೀಲ್ ಎಂಬುವರನ್ನು ಮದುವೆಯಾಗಿದ್ದಳು. ಆದರೆ ಸಂಸಾರದಲ್ಲಿ ಹೊಂದಾಣಿಕೆ ಇರದ ಕಾರಣ ತವರು ಮನೆಗೆ ಬಂದು ವಾಸವಿದ್ದಳು. ಅತ್ತ ಸುನೀಲ್‌ಗೆ ನಿವೇದಿತಾ.ಎಂ ಪರಿಚಯವಿತ್ತು. ನಾನು ಪೊಲೀಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಳು. ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿ ಕವನ ಮನೆಗೆ ಬಂದು, ನಾನು ಎಸ್‌ಪಿ, ವಿಚಾರಣೆಗಾಗಿ ಬಂದಿದ್ದೇನೆ ಎಂದು ಹೇಳಿದ್ದಾಳೆ.

ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತೇನೆಂದು ಎಂದು ಹೇಳಿದ ನಕಲಿ ಪೊಲೀಸ್ ನಿವೇದಿತಾ, ಕವನಾಳ ಮೊಬೈಲ್ ಪೋನ್ ಪಡೆದು. ಕವನಳನ್ನು ಮನೆಗೆ ಕರೆದುಕೊಂಡು ಬಂದು ನಾನು ಎಸ್‌ಪಿ, ನಿಮ್ಮ ಮಗಳಿಗೆ ಬುದ್ಧಿ ಹೇಳಿ, ಡಿವೋರ್ಸ್ ಕೊಡಿಸಿ ಎಂದು ಹೇಳಿದ್ದಾಳೆ. ಬಳಿಕ ಕವನಳನ್ನು ಹೆದರಿಸಿ 20 ಗ್ರಾಂ ಚಿನ್ನದ ನಕ್ಲೆಸ್, 10 ಗ್ರಾಂ ಚಿನ್ನದ ಉಂಗುರ, 2000 ಸಾವಿರ ನಗದು ಪಡೆದುಕೊಂಡು ಮೋಸ ಮಾಡಿದ್ದಾಳೆ ಎನ್ನಲಾಗಿದೆ.

ಸದ್ಯ ನಕಲಿ ಪೊಲೀಸ್ ಎಂದು ಹೇಳಿಕೊಂಡು ತಿರುಗಾಡ್ತಿದ್ದ ನಿವೇದಿತಾಳನ್ನು ಬಂಧಿಸಿ ತನಿಖೆ ನಡೆಸಿದಾಗ ಸ್ಪೋಟಕ‌ ಮಾಹಿತಿ ಬಯಲಾಗಿದೆ. ಹಲವು ಕಾರ್ಯಕ್ರಮಗಳಿಗೆ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲೇ ತೆರಳಿ ಭಾಗಿಯಾಗಿದ್ದಾಳೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಸದ್ಯ ನಿವೇದಿತಾಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!