ಬಿಸಿಲಿನ ತಾಪ ಹೆಚ್ಚಾದಾಗ ಏನಾದರೂ ತಂಪಾಗಿ ಕುಡಿಬೇಕು ಅನ್ನಿಸಿದಾಗ ಮನೆಯಲ್ಲೇ ಕೆಲವೇ ನಿಮಿಷಗಳಲ್ಲಿ ರುಚಿಯಾದ ಓರಿಯೋ ಮಿಲ್ಕ್‌ಶೇಕ್ ಮಾಡಿಕೊಳ್ಳಬಹುದು. ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಇಷ್ಟವಾಗುವ ಈ ಡ್ರಿಂಕ್ ದೇಹಕ್ಕೂ ತಂಪು ಕೊಡುತ್ತದೆ, ಮನಸ್ಸಿಗೂ ಫ್ರೆಶ್ ಫೀಲಿಂಗ್ ನೀಡುತ್ತದೆ.
ಬೇಕಾಗುವ ಪದಾರ್ಥಗಳು:
ತಣ್ಣಗಿನ ಹಾಲು 2 ಕಪ್, ಓರಿಯೋ ಬಿಸ್ಕೆಟ್ 7–8, ಸಕ್ಕರೆ 1 ಚಮಚ (ಬೇಕಾದಷ್ಟು), ಐಸ್ ಕ್ಯೂಬ್ಸ್ ಸ್ವಲ್ಪ, ವೆನಿಲ್ಲಾ ಐಸ್‌ಕ್ರೀಮ್ 1–2 ಸ್ಕೂಪ್.
ಮಾಡುವ ವಿಧಾನ:
ಮೊದಲು ಮಿಕ್ಸಿ ಜಾರ್‌ಗೆ ಹಾಲು ಹಾಲು, ಓರಿಯೋ ಬಿಸ್ಕೆಟ್‌ಗಳನ್ನು ತುಂಡು ಮಾಡಿ ಹಾಕಿ. ನಂತರ ಸಕ್ಕರೆ ಮತ್ತು ಐಸ್ ಕ್ಯೂಬ್ಸ್ ಸೇರಿಸಿ. ಇನ್ನೂ ಕ್ರೀಮಿ ರುಚಿ ಬೇಕಾದರೆ ಐಸ್‌ಕ್ರೀಮ್ ಹಾಕಬಹುದು. ಇದನ್ನೆಲ್ಲಾ ಒಂದು ನಿಮಿಷ ಚೆನ್ನಾಗಿ ಬ್ಲೆಂಡ್ ಮಾಡಿದರೆ ದಪ್ಪದ, ಚಾಕೊಲೇಟ್ ರುಚಿಯ ಮಿಲ್ಕ್‌ಶೇಕ್ ಸಿದ್ಧವಾಗುತ್ತದೆ.
ಗ್ಲಾಸ್‌ಗೆ ಸುರಿದು ಮೇಲಿಂದ ಓರಿಯೋ ಪುಡಿ ಅಥವಾ ಐಸ್‌ಕ್ರೀಮ್ ಹಾಕಿ ತಣ್ಣಗೆ ಸರ್ವ್ ಮಾಡಿದರೆ ಇನ್ನೂ ಮಜಾ. ಬಿಸಿಲಿನ ದಿನದಲ್ಲಿ ತಂಪು ತರುವ ಸುಲಭವಾದ, ರುಚಿಯಾದ ಪಾನೀಯ ಇದು.



