July 23, 2026
Thursday, July 23, 2026
spot_img

ಚಿಕನ್ ಅಂದ್ರೆ ಪಂಚಪ್ರಾಣನಾ? ವೀಕೆಂಡ್ ಧಮಾಕ ಮಾಡುವ ಮುನ್ನ ಈ ಸುದ್ದಿ ಓದಿ

ವಾರಾಂತ್ಯ ಬಂತೆಂದರೆ ಸಾಕು, ಬಹುತೇಕರ ಮನೆಯಲ್ಲಿ ಚಿಕನ್ ಅಡುಗೆಯದ್ದೇ ಕಾರುಬಾರು. ಆದರೆ “ವೀಕೆಂಡ್ ಅಂತ ಜಾಸ್ತಿ ಚಿಕನ್ ತಿನ್ನಬೇಡಿ” ಎಂದು ಆರೋಗ್ಯ ತಜ್ಞರು ಯಾಕೆ ಎಚ್ಚರಿಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ?

ವೀಕೆಂಡ್‌ನಲ್ಲಿ ನಾವು ಸಾಮಾನ್ಯವಾಗಿ ದೈಹಿಕ ಚಟುವಟಿಕೆ ಕಡಿಮೆ ಮಾಡಿ ವಿಶ್ರಾಂತಿ ಪಡೆಯುತ್ತೇವೆ. ಈ ಸಮಯದಲ್ಲಿ ಅತಿಯಾದ ಚಿಕನ್ ಸೇವನೆಯು ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು.

ಚಿಕನ್ ನೈಸರ್ಗಿಕವಾಗಿ ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತದೆ. ಮಿತಿ ಮೀರಿ ತಿಂದಾಗ ದೇಹದ ಉಷ್ಣತೆ ಹೆಚ್ಚಾಗಿ, ಮೂಲವ್ಯಾಧಿ ಅಥವಾ ಉಷ್ಣದ ಗುಳ್ಳೆಗಳಂತಹ ಸಮಸ್ಯೆ ಕಾಡಬಹುದು.

ವೀಕೆಂಡ್‌ನಲ್ಲಿ ನಾವು ತಿನ್ನುವ ಚಿಕನ್ ಹೆಚ್ಚಾಗಿ ಫ್ರೈ ಅಥವಾ ಮಸಾಲೆಯುಕ್ತ ಗ್ರೇವಿಗಳ ರೂಪದಲ್ಲಿರುತ್ತದೆ. ಇದರಲ್ಲಿ ಎಣ್ಣೆ ಮತ್ತು ಕ್ಯಾಲೋರಿಗಳು ಹೆಚ್ಚಿರುವುದರಿಂದ ರಕ್ತದೊತ್ತಡ ಮತ್ತು ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಇಂದಿನ ದಿನಗಳಲ್ಲಿ ಕೋಳಿಗಳಿಗೆ ಬೇಗ ಬೆಳೆಯಲು ಹಾರ್ಮೋನ್ ಇಂಜೆಕ್ಷನ್ ನೀಡಲಾಗುತ್ತದೆ. ಅತಿಯಾದ ಸೇವನೆಯು ಹಾರ್ಮೋನ್ ಅಸಮತೋಲನಕ್ಕೆ ದಾರಿ ಮಾಡಿಕೊಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !