ಕೇಸರಿ ಸೇವನೆ ಬರೀ ಗರ್ಭಿಣಿಯರಿಗೆ ಮಾತ್ರ ಅಲ್ಲ, ಎಲ್ಲರೂ ಇದನ್ನು ನಿಯಮಿತವಾಗಿ ಸೇವನೆ ಮಾಡಬಹುದು. ಹೇಗೆ? ಏನು? ಇದರಿಂದ ಆಗುವ ಬೆನಿಫಿಟ್ಸ್ ಇಲ್ಲಿದೆ..
ಬಹುತೇಕ ಜನರಿಗೆ ಮೂಡ್ ಸ್ವಿಂಗ್ ಸಾಮಾನ್ಯ ಕಂಡುಬರುತ್ತದೆ. ಪ್ರಮುಖವಾಗಿ ಮೂಡ್ ಸ್ವಿಂಗ್ ಹಾರ್ಮೋನ್ ಅಸಮತೋಲನದಿಂದ ಉಂಟಾಗುತ್ತದೆ. ಕೇಸರಿ ನೀರು ಮಾನಸಿಕ ಸಮಸ್ಯೆಗಳನ್ನು ದೂರವಾಗಿಸುತ್ತದೆ.
ಇದು ಆಲ್ಜೀಮರ್ಸ್ ರೋಗದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಹಾಗೂ ತಡೆಗಟ್ಟಲು ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಕೇಸರಿ ಹಿಪ್ಪೋಕ್ಯಾಂಪಸ್ನಲ್ಲಿ ಆಕ್ಸಿಡೇಟಿವ್ ಒತ್ತಡ ತಡೆದು ನೆನಪಿನ ಶಕ್ತಿ ವೃದ್ಧಿಸುತ್ತದೆ. ಜೊತೆಗೆ ಮಹಿಳೆಯರಲ್ಲಿ ಹಾರ್ಮೋನ್ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕೇಸರಿ ನೀರು ಜ್ವರ ಹಾಗೂ ನೆಗಡಿಯನ್ನು ಗುಣಪಡಿಸಲು ಪರಿಣಾಮಕಾರಿ ಕೆಲಸ ಮಾಡುತ್ತದೆ. ಕೇಸರಿ ಬೆರೆಸಿದ ನೀರನ್ನು ಕುಡಿಯುವುದರಿಂದ ನೆಗಡಿಯಿಂದ ಉಪಶಮನ ಲಭಿಸುತ್ತದೆ.
ಒಂದು ಗ್ಲಾಸ್ ಕೇಸರಿ ನೀರನ್ನು ಸೇವಿಸುವುದರಿಂದ ಕೀಲು ನೋವು, ಅಸ್ತಮಾ ಸೇರಿದಂತೆ ಋತುಮಾನಕ್ಕೆ ಸಂಬಂಧಿಸಿದ ಅಲರ್ಜಿಗೆ ಪರಿಹಾರ ಲಭಿಸುತ್ತದೆ. ನಿಯಮಿತವಾಗಿ ಕೇಸರಿ ನೀರು ಸೇವಿಸುವವರು ಕೀಲುನೋವು, ಅಸ್ತಮಾ, ಅಲ್ಪ ಪ್ರಮಾಣದ ಅಲರ್ಜಿಗಳು ದೂರವಾಗುತ್ತದೆ.
ಎರಡು ಮೂರು ಕೇಸರಿ ಎಳೆಗಳಿರುವ ನೀರನ್ನು ಸೇರಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕೇಸರಿ ನೀರು ರಕ್ತ ಪರಿಚಲನೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ರಕ್ತನಾಳಗಳಲ್ಲಿ ಬ್ಲಾಕ್ಗಳನ್ನು ಆಗುವುದನ್ನು ತಡೆಯುತ್ತದೆ. ಕೇಸರಿ ಕ್ರೊಸೆಟಿನ್ ಎನ್ನುವ ಸಕ್ರಿಯ ಸಂಯುಕ್ತ ಪದಾರ್ಥವಾಗಿದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕೇಸರಿ ನೀರು ನಿಮಗೆ ಹೆಚ್ಚು ಸಹಾಯ ಮಾಡುತ್ತದೆ. ಚಯಾಪಚಯವನ್ನು ವೇಗಗೊಳಿಸುತ್ತದೆ ಹಾಗೂ ಅತಿಯಾಗಿ ತಿನ್ನುವುದನ್ನು ಕೂಡ ತಡೆಯುತ್ತದೆ. ಖಿನ್ನತೆಯನ್ನು ದೂರವಾಗಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಕೇಸರಿ ನೀರಿನಲ್ಲಿ ಕ್ಯಾಲ್ಸಿಯಂ ಮತ್ತು ಇತರ ಪ್ರಮುಖ ಪೋಷಕಾಂಶಗಳಲ್ಲಿ ಹೇರಳವಾಗಿದೆ. ಮೂಳೆಗಳನ್ನು ಬಲಪಡಿಸಲು ಉತ್ತಮವಾಗಿ ಕೆಲಸ ಮಾಡುತ್ತದೆ. ನಿಯಮಿತವಾಗಿ ಕೇಸರಿ ನೀರನ್ನು ಕುಡಿಯುತ್ತಿದ್ದರೆ ನೀವು ಕೀಲು ನೋವು ಹಾಗೂ ಮೂಳೆ ದೌರ್ಬಲ್ಯವನ್ನು ತಡೆಯಬಹುದು.