ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ನಡೆದುಕೊಂಡು ಹೋಗುವ ವ್ಯಕ್ತಿ ಫೋನ್‌ನಲ್ಲಿ ಮಾತನಾಡ್ತಾ ರೋಡ್ ಕ್ರಾಸ್ ಮಾಡುವ ವ್ಯಕ್ತಿಗೆ ಸ್ವಲ್ಪವೂ ಜೀವ ಭಯ ಇಲ್ವಾ ಎಂದು ಕೂಗಿದ್ದಿದೆ.
ಆದರೆ ಛತ್ತೀಸ್‌ಗಢದಲ್ಲಿ ಪ್ರಯಾಣಿಕರಿದ್ದ ಬಸ್‌ನಲ್ಲಿ ಡ್ರೈವರ್ ಫೋನ್‌ನಲ್ಲಿ ಮಾತನಾಡುತ್ತಾ ಗಾಡಿ ಓಡಿಸಿದ್ದಾರೆ. ಅಷ್ಟೇ ಅಲ್ಲದೇ ಸ್ಪೀಡ್ ಬೇರೆ!
ಹೌದು, ನಿಯಂತ್ರಣ ತಪ್ಪಿದ ಬಸ್ ಸೇತುವೆಗೆ ಡಿಕ್ಕಿಯಾಗಿದ್ದು, 26 ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ, ಪೊಲೀಸರು ಪ್ರಕರಣ ದಾಖಲಿಸಿದ್ದು, ಘರ್ಘೋಡಾ ಪ್ರದೇಶದ ಬಳಿ ಚಾಲಕ ವೇಗವಾಗಿ ಬಸ್ ಚಲಾಯಿಸಿ ಸೇತುವೆಗೆ ಗುದ್ದಿದ್ದಾರೆ. ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ,