ಡ್ರೋನ್ ಪ್ರತಾಪ್ ಮೂರು ದಿನ ಪೊಲೀಸ್ ವಶಕ್ಕೆ: ಕಾರು, ಲ್ಯಾಪ್​ಟಾಪ್, ಮೊಬೈಲ್ ಸೀಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್​ಬಾಸ್​ ಖ್ಯಾತಿಯ ಡ್ರೋನ್ ಪ್ರತಾಪ್ ಸೈನ್ಸ್ ವಿಡಿಯೋ ಹೆಸರಿನಲ್ಲಿ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನೀರಿನಲ್ಲಿ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿದ್ದ ಕೇಸ್​ನಲ್ಲಿ ಮಾಜಿ ಬಿಗ್​ ಸ್ಪರ್ಧಿ ಡ್ರೋನ್​ ಪ್ರತಾಪ್​ ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ನಿನ್ನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್​ನನ್ನು ಬಂಧಿಸಿದ್ದಾರೆ. ವಿಡಿಯೋ ಆಧರಿಸಿ ಎಫ್​ಐಆರ್​ ಮಾಡಲಾಗಿತ್ತು. ಮಿಡಿಗೇಶಿ ಪೊಲೀಸರು BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿಕೊಂಡು ಡ್ರೋನ್ ಪ್ರತಾಪ್ ವಿಚಾರಣೆ ನಡೆಸುತ್ತಿದ್ದರು.

ಇದೀಗ ಪೊಲೀಸರು ಡ್ರೋನ್​ ಪ್ರತಾಪ್​ರನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಮಧುಗಿರಿಯ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ. ಎಂ. ಎಫ್ ಸಿ ಕೋರ್ಟ್​ಗೆ ಹಾಜರು ಪಡಿಸಲಾಗಿದೆ. ಸದ್ಯ ಡ್ರೋನ್​ ಪ್ರತಾಪ್​ ಅವರನ್ನು ಪೊಲೀಸರು 3 ದಿನ ವಶಕ್ಕೆ ಪಡೆದುಕೊಂಡಿದ್ದಾರೆ.

ಜೊತೆಗೆ ಬ್ಲಾಸ್ಟ್​ಗೆ ಬಳಸಿದ್ದ ವಸ್ತುಗಳನ್ನೇಲ್ಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಘಟನಾ ಸ್ಥಳಕ್ಕೆ ತೆರಳಲು ಬಳಸಿದ್ದ ಕಾರು, ಅಲ್ಲಿ ಬಳಸಿದ್ದ ಲ್ಯಾಪ್​ಟಾಪ್, ಮೊಬೈಲ್ ಸೇರಿ ಎಲ್ಲಾ ವಸ್ತುಗಳನ್ನ ಸೀಜ್ ಮಾಡಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!