ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಆರಂಭವಾಗಿವೆ. ಇನ್ನೂ ಪರಿಹಾರ ಬಂದಿಲ್ಲ. ಇದು ಹೀಗೇ ಮುಂದುವರಿದರೆ ದೊಡ್ಡ ಸಮಸ್ಯೆ ನಮ್ಮೆದುರು ಬಂದು ನಿಲ್ಲುತ್ತದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ತಿಂಗಳಿಗೆ ಎರಡು ಸಾವಿರ ರೂಪಾಯಿ ಬರ ಪರಿಹಾರ ನೀಡುತ್ತೇವೆ ಎಂದು ಹೇಳಿ ಮೂರು ತಿಂಗಳು ಕಳೆದಿದೆ. ಯಾವ ಪರಿಹಾರವೂ ಸಿಕ್ಕಿಲ್ಲ. ಸರಣಿ ಆತ್ಮಹತ್ಯೆ ಆರಂಭವಾಗಿವೆ. ಸರ್ಕಾರಕ್ಕೆ ಬರೀ ಉಚಿತ ಯೋಜನೆಗಳದ್ದೇ ತಲೆ ಬಿಸಿಯಾಗಿದೆ ಎಂದಿದ್ದಾರೆ.
ಸರ್ಕಾರ ಏನು ಕೊಟ್ಟಿದೆ ರೈತರಿಗೆ? ಉದ್ದುದ್ದ ಭಾಷಣ ಬಿಟ್ಟು ಇನ್ನೇನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ/