ತಮಿಳು ಸಿನಿಮಾರಂಗದಲ್ಲಿ ಡ್ರಗ್ಸ್ ಹವಾ: ಶ್ರೀಕಾಂತ್ ಬಳಿಕ ಮತ್ತೋರ್ವ ನಟ ಅರೆಸ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ತಮಿಳು ಚಿತ್ರೋದ್ಯಮದಲ್ಲಿ ಡ್ರಗ್ಸ್ ಹವಾ ಜೋರಾಗಿದೆ. ನಟ ಶ್ರೀಕಾಂತ್ ರನ್ನು ವಿಚಾರಣೆ ಒಳಪಡಿಸಿದಾಗ ನಲವತ್ತಕ್ಕೂ ಹೆಚ್ಚು ಬಾರಿ ಡ್ರಗ್ಸ್ ಸೇವಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು.

ವಿಚಾರಣೆಯ ನಂತರ ಪೊಲೀಸರು ಶ್ರೀಕಾಂತ್ ರನ್ನು ಬಂಧಿಸಿದ್ದರು. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಶ್ರೀಕಾಂತ್ ಕೂಡ ಹಲವು ನಟರ ಹೆಸರುಗಳನ್ನು ಬಾಯ್ಬಿಟ್ಟಿದ್ದ ಎಂದು ಹೇಳಲಾಗುತ್ತಿದೆ. ಶ್ರೀಕಾಂತ್ ಬಂಧನದ ನಂತರ ನಟ ಕೃಷ್ಣರನ್ನು ಪೊಲೀಸರು ಬಂಧಿಸಿದ್ದಾರೆ. ಕೃಷ್ಣ ಕೂಡ ಡ್ರಗ್ಸ್ ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ.

ತಮಿಳು ಚಿತ್ರೋದ್ಯಮದಲ್ಲಿ ಇನ್ನೂ ಕೆಲವು ನಟರು ಮತ್ತು ನಟಿಯರು ಹಾಗೂ ತಂತ್ರಜ್ಞರು ಈ ಡ್ರಗ್ಸ್ ಜಾಲದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಚೆನ್ನೈ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!