ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ನಟ ಶೈನ್ ಟಾಮ್ ಚಾಕೊ ಸಿನಿಮಾಗಳಲ್ಲಿ ಬಹುತೇಕ ವಿಲನ್ ಪಾತ್ರಗಳಲ್ಲೇ ನಟಿಸುತ್ತಾರೆ. ಆದ್ರೆ ಇದೀಗ ನಿಜ ಜೀವನದಲ್ಲಿಯೂ ವಿಲನ್ ರೀತಿ ನಡೆದುಕೊಂಡು ಸುದ್ದಿಯಾಗಿದ್ದಾರೆ.
ಹೋಟೆಲ್ ಒಂದರ ಮೇಲೆ ಪೊಲೀಸರು ದಾಳಿ ಮಾಡಿದಾಗ ಟಾಮ್ ಚಾಕೋ ಅಲ್ಲಿಂದ ಓಡಿ ಪರಾರಿ ಆಗಿದ್ದಾರೆ. ಈ ದೃಶ್ಯ ಇದೀಗ ಹೋಟೆಲ್ನ ಸಿಸಿಟಿವಿ ಕ್ಯಾಮೆರಾನಲ್ಲಿ ಸೆರೆಯಾಗಿದೆ.
ಸಿನಿಮಾ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದ ಶೈನ್ ಟಾಮ್ ಚಾಕೊ ಕೊಚ್ಚಿಯ ಹೊಟೆಲ್ ಒಂದರಲ್ಲಿ ತಂಗಿದ್ದರು. ಚಾಕೊ, ಹೋಟೆಲ್ನಲ್ಲಿ ಡ್ರಗ್ ಬಳಕೆ ಮಾಡುತ್ತಿರುವ ಬಗ್ಗೆ ಸುಳಿವು ಪಡೆದ ಪೊಲೀಸರು ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಟಾಮ್ ಚಾಕೊ ಉಳಿದುಕೊಂಡಿದ್ದ ರೂಂ ಸಂಖ್ಯೆ 314ರ ಬಾಗಿಲು ಬಡಿದಿದ್ದಾರೆ. ಬಾಗಿಲು ಬಡಿದಿರುವುದು ಪೊಲೀಸರೆ ಎಂದು ತಿಳಿದ ಟಾಮ್ ಚಾಕೋ, ತಾನು ತಂಗಿದ್ದ ರೂಮಿನ ಕಿಟಕಿಯಿಂದ ಹೊರಗೆ ಬಂದು ಅಲ್ಲಿಂದ ಎರಡನೇ ಫ್ಲೋರ್ಗೆ ಹಾರಿ ಅಲ್ಲಿಂದ ಮೆಟ್ಟಿಲು ಹಿಡಿದು ಕೆಳಗೆ ಬಂದು ಅಲ್ಲಿಂದ ಪರಾರಿ ಆಗಿದ್ದಾರೆ. ಟಾಮ್ ಚಾಕೋ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
2011 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಟಾಮ್ ಚಾಕೊ ಪ್ರತಿಭಾವಂತ ನಟ. ಮಲಯಾಳಂನ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಮಲಯಾಳಂ ಸೂಪರ್ ಹಿಟ್ ಸಿನಿಮಾಗಳಾದ ‘ತಲ್ಲುಮಾಲ’, ‘ಇಷ್ಕ್’, ‘ಕುರುಪ್’, ‘ಆಪರೇಷನ್ ಜಾವಾ’, ‘ಕುರುತಿ’, ‘ಕನ್ನೂರು ಸ್ಕ್ವಾಡ್’, ‘ಅಡಿಯೋಸ್ ಅಮಿಗೊ’, ‘ಬಜೂಕಾ’ ತಮಿಳಿನಲ್ಲಿ ವಿಜಯ್ ನಟನೆಯ ‘ಬೀಸ್ಟ್’, ನಾನಿ ನಟನೆಯ ‘ದಸರಾ’, ಜೂ ಎನ್ಟಿಆರ್ ಜೊತೆಗೆ ‘ದೇವರ’, ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’, ‘ರಾಬಿನ್ಹುಡ್’, ‘ಗುಡ್ ಬ್ಯಾಡ್ ಅಗ್ಲಿ’, ‘ಜಿಗರ್ತಾಂಡಾ ಡಬಲ್ ಎಕ್ಸ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.