ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಹಾಗೂ ತೆಲುಗು ನಟ ಶ್ರೀಕಾಂತ್ ಅವರನ್ನು ಡ್ರಗ್ಸ್ ಕೇಸ್ ಅಡಿ ಬಂಧಿಸಲಾಗಿದೆ.
ಬೆಳಗ್ಗೆಯಷ್ಟೇ ವಿಚಾರಣೆಗಾಗಿ ಚೆನ್ನೈ ಪೊಲೀಸರು ಶ್ರೀಕಾಂತ್ ಅಲಿಯಾಸ್ ಶ್ರೀರಾಮ್ನನ್ನು ವಶಕ್ಕೆ ಪಡೆದಿದ್ದರು. ಶ್ರೀಕಾಂತ್ ಡ್ರಗ್ಸ್ ಸೇವನೆ ಧೃಡಪಟ್ಟಿರುವುದರಿಂದ ಬಂಧಿಸಲಾಗಿದೆ ಎನ್ನುವ ಮಾಹಿತಿ ಇದೆ.
ಡ್ರಗ್ಸ್ ಸೇವೆನೆ ಪತ್ತೆ ಹಚ್ಚುವುದಕ್ಕಾಗಿ ನುಂಗಂಬಾಕ್ಕಂ ಪೊಲೀಸರು ಶ್ರೀಕಾಂತ್ ರನ್ನು ಕರೆತಂದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರು. ಸದ್ಯ ರಕ್ತದ ಪರೀಕ್ಷೆಯ ವರದಿ ಬಂದಿದ್ದು, ಶ್ರೀಕಾಂತ್ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ. ಹಾಗಾಗಿ ಎನ್ ಡಿಪಿಎಸ್ ಕಾಯ್ದೆ ಅಡಿ ಶ್ರೀಕಾಂತ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.