ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಕೂಗು: ತನಿಖೆಗೆ ಇಳಿದ ಪೊಲೀಸರು

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಭಾರೀ ಸದ್ದು ಮಾಡಿತ್ತು. ಇದಾದ ಬಳಿಕ ಕೆಲವು ಹಿರಿಯ ನಟ, ನಿರ್ದೇಶಕರ ವಿರುದ್ಧ ಎಫ್​ಐಆರ್ ದಾಖಲಾಗಿದ್ದವು. ಇದೀಗ ಡ್ರಗ್ಸ್ ಪ್ರಕರಣದಲ್ಲಿ ಕೆಲ ನಟರು ಸಿಲುಕಿಕೊಂಡಿದ್ದು, ಪ್ರಕರಣದ ಆಳ ತನಿಖೆ ನಡೆಸುವುದಾಗಿ ಕೊಚ್ಚಿ ಪೊಲೀಸರು ಹೇಳಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಭೂಗತ ಪಾತಕಿ, ಮಾದಕ ವಸ್ತುವಿನ ಡೀಲರ್ ಓಂ ಪ್ರಕಾಶ್​ ಅನ್ನು ಮರಡು ಪೊಲೀಸರು ಹೊಟೇಲ್ ಒಂದರಲ್ಲಿ ಬಂಧಿಸಿದ್ದರು. ಆತನ ಬಂಧಿಸಿದಾಗ ಹೊಟೇಲ್ ​ನಲ್ಲಿ ಡ್ರಗ್ಸ್ ಸಹ ವಶಪಡಿಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದಾಗ ಹೊಟೇಲ್ ​ಗೆ ಕೆಲ ನಟ-ನಟಿಯರು ಸಹ ಬಂದು ಹೋಗಿರುವುದು ಪತ್ತೆ ಆಗಿದ್ದು, ಅವರ ವಿಚಾರಣೆ ನಡೆಸುವುದಾಗಿ ಕೊಚ್ಚಿ ಪೊಲೀಸರು ಹೇಳಿದ್ದಾರೆ.

ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಶ್ರೀನಾಥ್ ಬಾಸಿ ಹಾಗೂ ನಟಿ ಪ್ರಯಾಗಾ ಮಾರ್ಟಿನ್ ಅವರುಗಳು ಓಂ ಪ್ರಕಾಶ್​ ತಂಗಿದ್ದ ಹೊಟೇಲ್​ಗೆ ಭೇಟಿ ನೀಡಿದ್ದರು ಎನ್ನುವುದು ಪೊಲೀಸರಿಗೆ ತಿಳಿದು ಬಂದಿದ್ದು, ಅವರಿಬ್ಬರನ್ನೂ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ

ಈ ನಡುವೆ ನಟಿ ಪ್ರಯಾಗಾ ಮಾರ್ಟಿನ್ ಅವರ ಕುಟುಂಬದವರು ನಟಿಯು ಡ್ರಗ್ಸ್ ಪ್ರಕರಣದೊಂದಿಗೆ ಸಂಬಂಧ ಹೊಂದಿಲ್ಲ ಎಂದಿದ್ದಾರೆ. ಆದರೆ ಶ್ರೀನಾಥ್ ಬಾಸಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!