SHOCKING| ಮಾದಕ ವಸ್ತು ಮಿಶ್ರಿತ ಚಾಕೋಲೆಟ್‌ ಮಾರಾಟಕ್ಕೆ ಯತ್ನ!

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಮಾದಕ ವಸ್ತು ಮಿಶ್ರಿತ ಚಾಕೋಲೆಟ್‌ ಮಾರಾಟಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಹೈಲ್ಯಾಂಡ್ ಬಳಿಯ ಅಂಗಡಿಯಲ್ಲಿ ಬಾಂಗ್ ಮಿಶ್ರಿತ ಚಾಕೋಲೆಟ್‌ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಬೆಚನ್ ಸೊನ್ನರ್ (45) ಹಾಗೂ ಮಂಗಳೂರಿನ ಮನೋಹರ್ ಶೇಟ್ (49) ಬಂಧಿತ ಆರೋಪಿಗಳು.

ಉತ್ತರಪ್ರದೇಶ ಮೂಲದ ಬೆಚನ್ ಸೊನ್ನರ್ ತನ್ನ ಗೂಡಗಂಡಿಯಲ್ಲಿ 5,500 ಮೌಲ್ಯದ ಮಹಾಶಕ್ತಿ ಮುನಕ್ಕಾ, ಬಮ್ ಬಮ್ ಮುನಕ್ಕಾ ವಟಿ, ಪವರ್ ಮುನಕ್ಕಾ ವಟಿ ಹಾಗೂ ಆನಂದ್ ಚೂರ್ಣ ಎಂಬ ಹೆಸರಿನ ಚಾಕೋಲೆಟ್ ಗಳಲ್ಲಿ ಮಾದಕ ವಸ್ತುಗಳನ್ನು ಮಿಶ್ರಣ ಮಾಡಿ ಮಾರುತ್ತಿದ್ದರು.

ಮನೋಹರ್ ಶೇಟ್ ಬಳಿ ಮೂರು ಗೋಣಿ ಚೀಲಗಳಲ್ಲಿ ಇಟ್ಟಿದ್ದ 48 ಸಾವಿರ ಮೌಲ್ಯದ ಚಾಕೋಲೆಟ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ಎರಡೂ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಾಕೋಲೇಟ್ ಗಳನ್ನು ವಶಕ್ಕೆ ಪಡೆದು ಲ್ಯಾಬ್ ಗೆ ರವಾನಿಸಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!