ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಳು ಮಲೆ ಎಪ್ಪತ್ತೇಳು ಮಲೆಯ ಒಡೆಯ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯದ ಕಳ್ಳಾಟ ಹೆಚ್ಚಾಗಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ಆಗುತ್ತಿದ್ದು, ಶನಿವಾರ ನಡೆದ ಪೊಲೀಸರ ದಾಳಿ ವೇಳೆ ಬರೋಬ್ಬರಿ 300 ಲೀಟರ್ ಮದ್ಯ ಜಪ್ತಿಯಾಗಿದೆ.
ಸಿಎಂ ಸಿದ್ದರಾಮಯ್ಯ ಮಲೆ ಮಹದೇಶ್ವರ ಬೆಟ್ಟವನ್ನ ಮದ್ಯ ಮುಕ್ತ ಪ್ರದೇಶವನ್ನಾಗಿಸುವ ಸಂಕಲ್ಪ ಮಾಡಿದ್ದಾರೆ. ಈಗ ಮತ್ತೆ ಮಲೆ ಮಹದೇಶ್ವರ ಬೆಟ್ಟದಲ್ಲಿ 300 ಲೀಟರ್ ಮದ್ಯ ಜಪ್ತಿಯಾಗಿದೆ.
ಅಕ್ರಮವಾಗಿ ಮದ್ಯ ತಂದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಎಸ್ ಪಿ ಹಾಗೂ ಅಬಕಾರಿ ಇಲಾಖೆಯ ಡಿಸಿ ಈ ಕುರಿತು ಹೆಚ್ಚಿನ ನಿಗಾ ವಹಿಸಬೇಕಿದೆ ಎಂದು ತಿಳಿಸಿದ್ದಾರೆ.