ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಬಹುತೇಕರು ಮನೆಯ ಹಿಂಬದಿಯ ಬಾಲ್ಕನಿಯನ್ನು ಬಟ್ಟೆ ಒಣಗಿಸುದಕ್ಕೆ ಬೇಡದ ವಸ್ತುಗಳನ್ನು ಇಡುವುದಕ್ಕೆ ಬಳಸುತ್ತಾರೆ. ಆದರೆ ಇನ್ನು ಮುಂದೆ ಇದೇ ರೀತಿ ನೀವು ಅಬುಧಾಬಿಯಲ್ಲಿ ಮಾಡಲು ಹೋದರೆ ದುಬಾರಿ ದಂಡ ಕಟ್ಟಬೇಕಾಗುತ್ತದೆ.
ಹೌದು! ಅಪಾರ್ಟ್‌ಮೆಂಟ್‌ಗಳ ಬಾಲ್ಕನಿಯಲ್ಲಿ ನೇತು ಹಾಕಿರುವ ಬಟ್ಟೆಗಳು ಬೇಡ ವಸ್ತುಗಳಿಂದ ನಗರದ ಸೌಂದರ್ಯ ಹಾಳಾಗುತ್ತಿದೆ ಎಂಬ ನಿರ್ಧಾರಕ್ಕೆ ಬಂದಿರುವ ಅಬುಧಾಬಿ ಆಡಳಿತವೂ ಈ ಬಾಲ್ಕನಿಯಲ್ಲಿ ಇನ್ನು ಮುಂದೆ ಕಸಗಳನ್ನು ರಾಶಿ ಹಾಕುವುದು ಅಥವಾ ಬಟ್ಟೆಗಳನ್ನು ನೇತು ಹಾಕಲು ಜಾಗ ಮಾಡಿಕೊಂಡರೆ ಅಂತಹ ಜನರಿಗೆ ಭಾರಿ ದಂಡ ವಿಧಿಸಲು ಸಿದ್ಧತೆ ನಡೆಸಿದೆ.
ಮೊದಲಿಗೆ 500 ದಿರ್ಹಮ್ (ಭಾರತೀಯ ರೂಪಾಯಿಗಳಲ್ಲಿ11,627 ರೂ) ದಂಡ ಹಾಕಲಿರುವ ಅಬುಧಾಬಿ ನಂತರ ಈ ಕೃತ್ಯವನ್ನು ಮತ್ತೆ ಮತ್ತೆ ಮುಂದುವರಿಸಿದರೆ 2000 (ಭಾರತೀಯ ರೂಪಾಯಿಗಳಲ್ಲಿ 46,509 ರೂ) ದಿಹ್ರಮ್ ದಂಡ ವಿಧಿಸಲಿದೆ. ಸುಸ್ಥಿರ ನಗರ ಪರಿಸರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ಅಬುಧಾಬಿ ಮುಂದಾಗಿದೆ.