ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಪ್ಪನ ಅಗ್ರಹಾರ ಜೈಲಿನಲ್ಲಿ ದುಡ್ಡಿದ್ದವರದ್ದೇ ದುನಿಯಾ. ಇಲ್ಲಿ ದರ್ಶನಷ್ಟೇ ಅಲ್ಲ, ಪ್ರತಿಯೊಬ್ಬ ಖೈದಿಗೂ ಸವಲತ್ತು ಸಿಗುತ್ತದೆ. ಈ ಸವಲತ್ತು ಬೇಕಾದರೆ ಸಾವಿರಾರು ರೂ. ಖರ್ಚು ಮಾಡಬೇಕು. ಹೌದು, ಬಿಸಿ ನೀರು, ಎಣ್ಣೆ, ಸಿಗರೇಟ್ ಮತ್ತು ವಿಶೇಷ ಊಟಕ್ಕೆ ಬೆಲೆ ನಿಗದಿಯಾಗಿದೆ.
ಅದಕ್ಕಿಂತ ಮುಖ್ಯವಾಗಿ, ಜೈಲುಗಳಿಗೆ ಸಾಮಗ್ರಿಗಳನ್ನು ಪೂರೈಸಲು ವಿಶೇಷ ಸಿಂಡಿಕೇಟ್ ಇದೆ. ಕಾರಾಗೃಹಕ್ಕೆ ಸಾಮಗ್ರಿಗಳನ್ನು ಪೂರೈಸಲು ಪ್ರತ್ಯೇಕ ಸಿಂಡಿಕೇಟ್ ಇದೆ. ಈ ಸಿಂಡಿಕೇಟ್‌ನ ಸದಸ್ಯರು ಬೇರೆ ಯಾರು ಅಲ್ಲ 10 ವರ್ಷಕ್ಕೂ ಹೆಚ್ಚು ಕಾಲ ಇರುವ ಕೈದಿಗಳು. ಕೈದಿಗಳಿಗೆ ಏನು ನೀಡಬೇಕೆಂದು ಕೈದಿಗಳಿಂದಲೇ ನಿರ್ಧಾರ ಮಾಡ್ತಾರಂತೆ. ಯಾವ ಕೈದಿಗಳು ಯಾವ ಯಾವ ಸೆಲ್ನಲ್ಲಿ ಇರಬೇಕು?. ಎಷ್ಟು ಹಣಕ್ಕೆ ಯಾವ ಸೌಲಭ್ಯ ಕೊಡಬೇಕೆಂದು ಡಿಸೈಡ್ ಮಾಡಲಾಗುತ್ತೆ.
ಬಿಸಿನೀರಿನ ಬೆಲೆ, ಸಿಗರೇಟಿನ ಬೆಲೆ, ಆಹಾರದ ಬೆಲೆ, ಎಣ್ಣೆ, ಟೆಲಿಫೋನ್, ಹಾಸಿಗೆ ಬೆಲೆಯನ್ನು ನಿಗದಿಪಡಿಸಲಾಗಿದೆ. ಕೈದಿಗಳಿಂದ ವ್ಯವಸ್ಥಿತವಾಗಿ ಹಣವನ್ನು ಸಂಗ್ರಹಿಸುವ ಸ್ವಯಂಸೇವಕರು ಅವರನ್ನು ಭೇಟಿ ಮಾಡುವ ಕೈದಿಗಳಿಂದ ಹಣವನ್ನು ಪಡೆಯುತ್ತಾರೆ. ಫೋನ್ ಪೇ, ಗೂಗಲ್ ಪೇ ಮತ್ತು ಬ್ಯಾಂಕ್ ವರ್ಗಾವಣೆಗಳ ಮೂಲಕ ಜೈಲಿನಲ್ಲಿರುವ ಸಿಂಡಿಕೇಟ್ ಸದಸ್ಯರಿಗೆ ಹಣವನ್ನು ಪಾವತಿಸಲಾಗುತ್ತದೆ ಎನ್ನಲಾಗಿದೆ.