ದಿಗಂತ ವರದಿ ಕಾರವಾರ :
ಭಾರಿ ಮಳೆಗೆ ಮನೆಯ ಮೇಲೆ ಗುಡ್ಡ ಕುಸಿದು ವ್ಯಕ್ತಿಯೋರ್ವ ಅದರಡಿ ಸಿಲುಕಿರುವ ಘಟನೆ ಮಂಗಳವಾರ ಬೆಳಿಗ್ಗೆ 7.30 ಸಮಯಕ್ಕೆ ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಹತ್ತಿರ ನಡೆದಿದೆ.
ಮಳೆಯಬ್ಬರಕ್ಕೆ ಗುಡ್ಡ ಕುಸಿದು, ಪಕ್ಕದ ಹೆಂಚಿನ ಮನೆ ಪೂರ್ತಿಯಾಗಿ ನೆಲಸಮವಾಗಿದೆ.ಹಾಗೂ ಈ ಮನೆಯಲ್ಲಿದ್ದ ತಿಕರ್ಸ್ ಗುರುವ್ ಇವರು ಮನೆಯಲ್ಲಿ ಸಿಲುಕಿಕೊಂಡಿದ್ದಾರೆ.ಊರಿನ ಜನ ಸೇರಿ ಇವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.