ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರಂತರ ಮಳೆಯಿಂದಾಗಿ ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಇನ್ನೂ ಎರಡು ತಿಂಗಳು ಬೆಲೆ ಹೆಚ್ಚಳವೇ ಇರುವ ಸಾಧ್ಯತೆಗಳಿವೆ, ಇನ್ನು ಟೊಮ್ಯಾಟೊ ಜೊತೆಗೆ ಇತರ ತರಕಾರಿಗಳ ಬೆಲೆಯೂ ಹೆಚ್ಚಳವಾಗಿದೆ.
ಕೆಲವು ಕಡೆ ಟೊಮ್ಯಾಟೊ ಕೆಜಿಗೆ 200 ರೂಪಾಯಿ ದರ ಇದೆ, ಟೊಮ್ಯಾಟೊ ಬೆಳೆ ಜಾಗದಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ, ಮಣ್ಣಿನ ಕೆಳಗೆ ಬೆಳೆಯುವ ಈರುಳ್ಳಿ ಶುಂಠಿ ಹಾಗೂ ತರಕಾರಿಗಳು ಕೂಡ ಹಾಳಾಗಿದ್ದು, ಎಲ್ಲ ತರಕಾರಿಗಳ ಬೆಲೆ ಹೆಚ್ಚಾಗಲಿದೆ.
ರಾಜಸ್ಥಾನ, ಕೊಲ್ಕತ್ತಾ, ಮುಂಬೈ, ಚೆನ್ನೈ ಹಾಗೂ ದೆಹಲಿಯಲ್ಲಿ ಟೊಮ್ಯಾಟೊ ಬೆಲೆ ಶತಕ ದಾಟಿದ್ದು, ದ್ವಿಶತಕದ ಕಡೆ ಸಾಗುತ್ತಿದೆ.