ಧರ್ಮ-ಜಾತಿ ಕಲಹದಿಂದ ರಾಜ್ಯಕ್ಕೆ ಬಂಡವಾಳ ಹೂಡಿಕೆ ಇಲ್ಲ: ಶಾಸಕ ಆರ್.ವಿ. ದೇಶಪಾಂಡೆ ಆರೋಪ

ಹೊಸದಿಗಂತ ವರದಿ, ಅಂಕೋಲಾ:

ಧರ್ಮ ಮತ್ತು ಜಾತಿ ಕಲಹದ ಕಾರಣದಿಂದ ರಾಜ್ಯದಲ್ಲಿ ಬಂಡವಾಳ ಹೂಡಲು ಯಾರೂ ಮುಂದೆ ಬರುತ್ತಿಲ್ಲ. ಇದಕ್ಕೆ ರಾಜ್ಯ ಸರ್ಕಾರ ನೇರ ಹೊಣೆ ಎಂದು ಮಾಜಿ ಸಚಿವ , ಶಾಸಕ ಆರ್.ವಿ. ದೇಶಪಾಂಡೆ ಆರೋಪ ಮಾಡಿದರು.
ಅವರು ಸೋಮವಾರ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ  ಮಾತನಾಡಿದರು.
ದೇಶ ಮತ್ತು ರಾಜ್ಯದಲ್ಲಿ ಜನ ನೆಮ್ಮದಿಯಿಂದ ಇಲ್ಲ. ಬೆಲೆ ಏರಿಕೆ, ಸಾಮರಸ್ಯ ಇಲ್ಲದ ವಾತಾವರಣದಿಂದ ಜನ ಬೇಸರಗೊಂಡಿದ್ದಾರೆ. ನಿರುದ್ಯೋಗ ಕಾಡಿದ್ದು,ರಾಜ್ಯದ ವಾತಾವರಣ ನೋಡಿ ಯಾರೂ ಉದ್ಯಮ ಸ್ಥಾಪನೆಗೆ ಮುಂದೆ ಬರುತ್ತಿಲ್ಲ.ಹೀಗಾಗಿ ಪಕ್ಷವನ್ನು ತಳಮಟ್ಟದಿಂದ ಬಲ ಪಡಿಸಿ ಅಧಿಕಾರಕ್ಕೆ ತರುವ ಬದ್ದತೆ ಕಾರ್ಯಕರ್ತರದ್ದಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕ ಸತೀಶ ಸೈಲ್  ,ರಮಾನಂದ ಬಿ. ನಾಯಕ ಮಾತನಾಡಿ
ಸದಸ್ಯತ್ವದ ಮೂಲಕ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ  ಪ್ರಮುಖೆ ಸೂಷ್ಮಾ ರಾಜಗೋಪಾಲ, ಪ್ರಮುಖರಾದ‌ ಕೆ.ಎಚ್.ಗೌಡ,  , ಕೆ.ಎಚ್. ಗೌಡ, ಶಂಭು ಶೆಟ್ಟಿ, ಸುಜಾತಾ ಗಾಂವಕರ್, ಸಾಯಿಗಾಂವಕರ್ ಮತ್ತಿತರರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ ಸ್ವಾಗತಿಸಿದರು. ವಿನೋದ ನಾಯಕ ಭಾಸಗೋಡ ಕಾರ್ಯಕ್ರಮ ನಿರ್ವಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!