ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ನಾಸಿಕ್‌ನಲ್ಲಿ ನೀರಿನ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ನೀರಿಗಾಗಿ ಜನ ಕ್ಯೂ ಕಟ್ಟುವ ಪರಿಸ್ಥಿತಿ ಬಂದಿದೆ. ನಾಸಿಕ್‌ನ ಪೈಂಟ್ ಗ್ರಾಮದ ಮಹಿಳೆಯರು ಬಾವಿಯೊಂದಕ್ಕೆ ಹೋಗಿ ನೀರು ಸೇದಲು ನಿಂತಿರುವ ವಿಡಿಯೋ ವೈರಲ್ ಆಗಿದೆ.
ನೀರಿಗಾಗಿ ಅವರು ಪಡುತ್ತಿರುವ ಕಷ್ಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರತಿನಿತ್ಯ ಕಿಲೋಮೀಟರ್ ಗಟ್ಟಲೆ ನಡೆದು ನೀರು ತರಲು ಗಂಟೆಗಟ್ಟಲೆ ಬೇಕಾಗುತ್ತದೆ. ಕೆಲವರು ಪ್ರಾಣವನ್ನೂ ಲೆಕ್ಕಿಸದೆ ಬಾವಿಗೆ ಇಳಿಯುತ್ತಿದ್ದಾರೆ. ಬಾವಿಗೆ ಯಾವುದೇ ಸುರಕ್ಷತೆ ಇಲ್ಲಿದಿರುವುದು ಮತ್ತೊಂದು ಆತಂಕ. ಅದರ ಮೇಲೆ ನಿಂತು ನೀರು ಸೇದುವಾಗ ಅಪ್ಪ-ತಪ್ಪಿ ಬಿದ್ದರೂ ಪ್ರಾಣಪಕ್ಷಿ ಹಾರಿಹೋಗುತ್ತದೆ.
ಅನೇಕ ಕುಟುಂಬಗಳಿಗೆ ನೀರು ಪಡೆಯಲು ಈ ಬಾವಿಯೊಂದೇ ದಾರಿ. ನಾಸಿಕ್‌ನ ಹಲವು ಗ್ರಾಮಗಳು ಹಲವು ವರ್ಷಗಳಿಂದ ನೀರಿನ ಕೊರತೆಯನ್ನು ಅನುಭವಿಸುತ್ತಿವೆ. ಬಹಳ ದಿನಗಳಿಂದ ನೀರಿಗಾಗಿ ನಾನಾ ಸಮಸ್ಯೆ ಎದುರಿಸುತ್ತಿದ್ದು, ಶೀಘ್ರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು ಅಂತಿದಾರೆ ಜನ.
#WATCH | Maharashtra: Due to water crisis, women in Nashik's Peint village, descent into a well to fetch water (17/05) pic.twitter.com/61xS8MSJKd
— ANI (@ANI) May 18, 2023