ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಾಕೇಶ್ ಪೂಜಾರಿ ನಿಧನ ಎಲ್ಲರಿಗೂ ಶಾಕ್ ಕೊಟ್ಟಿದೆ. ತಂಗಿ ಮದ್ವೆ ಮಾಡ್ಬೇಕು ಅಂತ ಆಸೆ ಪಟ್ಟಿದ್ದ ರಾಕೇಶ್ ಆ ಕನಸು ಹಾಗೆ ಉಳಿದು ಹೋಗಿದೆ. ನನಸಾಗದ ಈ ಕನಸನ್ನು ನನಸು ಮಾಡಲು ಹೊರಟಿದ್ದಾರೆ ದುನಿಯಾ ವಿಜಯ್.
ಮಾರುತ ಚಿತ್ರದ ಪ್ರೆಸ್ ಮೀಟ್ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಕೇಶ್ ಪೂಜಾರಿ ಸಹೋದರಿ ಮದ್ವೆಗೆ ನಾನು ಸಹಾಯ ಮಾಡ್ಬೇಕು ಅಂದಕೊಂಡಿದ್ದೇನೆ. ನನ್ನ ಕೈಯಲ್ಲಿ ಏನು ಸಾಧ್ಯವಾಗುತ್ತದೆಯೋ ಅದನ್ನ ನಾನು ಮಾಡುವೆ. ಹಾಗೇನೆ ರಾಕೇಶ್ ಸಹೋದರಿ ಮದುವೆಗೂ ಹೋಗುತ್ತೇನೆ ಎಂದು ವಿಜಯ್ ಹೇಳಿಕೊಂಡಿದ್ದಾರೆ.
ರಾಕೇಶ್ ಪೂಜಾರಿ ಸಾವು ಬೇಸರ ತಂದಿದೆ. ನಿಜಕ್ಕೂ ಬೇಸರ ಆಗುತ್ತದೆ. ಅದೆಷ್ಟೋ ಜನರನ್ನ ರಾಕೇಶ್ ನಗಿಸಿದ್ದಾರೆ. ರಾಕೇಶ್ ಹಾಸ್ಯಕ್ಕೆ ನಗದವ್ರೆ ಇಲ್ಲ. ರಾಕೇಶ್ ಕಾಮಿಡಿ ವಿಡಿಯೋಗಳನ್ನ ನಾನು ಕೂಡ ನೋಡಿದ್ದೇನೆ. ಒಳ್ಳೆ ಕಲಾವಿದ ರಾಕೇಶ್. ಆದರೆ, ಜನರನ್ನ ನಗಿಸಿದ್ದ ರಾಕೇಶ್ ಹೋಗ್ಬಿಟ್ಟ ನೋಡಿ ಅಂತಲೇ ದುನಿಯಾ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ.