ಕೇರಳದ ರಸ್ತೆಗಳಲ್ಲಿ ಕಾಣಲಿದೆ ಶೀಘ್ರವೇ ಸೂಪರ್ ಫಾಸ್ಟ್ ಪ್ರೀಮಿಯಂ ಬಸ್‌ಗಳ ದರ್ಬಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಕೇರಳದ ರಸ್ತೆಗಳಲ್ಲಿ ಶೀಘ್ರವೇ ಸೂಪರ್ ಫಾಸ್ಟ್ ಪ್ರೀಮಿಯಂ ಎಸಿ ಬಸ್ ಸೇವೆ ಆರಂಭವಾಗಲಿದೆ.

ಇದಕ್ಕೆ ಪೂರ್ವಭಾವಿಯಾಗಿ ಕೇರಳ ಎಸ್‌ಆರ್‍ಟಿಸಿ ಈ ಬಸ್‌ಗಳನ್ನು ಪ್ರಾಯೋಗಿಕ ಓಡಾಟ ನಡೆಸಲು ರಸ್ತೆಗಿಳಿಸಿದೆ. ಈ ಪ್ರಾಯೋಗಿಕ ಸಂಚಾರದ ನಂತರ ಬಸ್‌ಗಳ ಕಾರ್ಯಕ್ಷಮತೆ ಪರಿಶೀಲಿಸಿ ಮುಂದಿನ ಕ್ರಮ ಎಂದು ಸಂಸ್ಥೆ ಹೇಳಿದೆ. ಈ ಬಸ್‌ಗಳಲ್ಲಿ ಟಿಕೆಟ್ ದರವು ಸೂಪರ್ ಫಾಸ್ಟ್‌ಗಿಂತ ಹೆಚ್ಚಾಗಿರುತ್ತದೆ. ಪ್ರೀಮಿಯಂ ಬಸ್‌ಗಳನ್ನು ಹವಾನಿಯಂತ್ರಿತ ವ್ಯವಸ್ಥೆ ಹೊಂದಿದ್ದು, 40 ಸೀಟುಗಳನ್ನು ಹೊಂದಿದೆ. ಹಿಂದಿನ ಸಾಲನ್ನು ಹೊರತುಪಡಿಸಿ ಆಸನಗಳು ಪುಶ್‌ಬ್ಯಾಕ್ ಆಗಿವೆ ಎಂದು ಕೂಡಾ ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!