ಸಖತ್‌ ವೈರಲ್‌ ಆಗ್ತಿದೆ ಪಾನಿಪೂರಿಯಿಂದ ಅಲಂಕೃತಗೊಂಡ ದುರ್ಗಾಮಾತೆ ದೇವಾಲಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ಶಕ್ತಿದೇವತೆಗಳ ದೇವಾಲಯಗಳ ಅಲಂಕಾರ ನೋಡಲು ಎರಡು ಕಣ್ಣು ಸಾಲುತ್ತಿಲ್ಲ. ವಿಸೇಷ ಸಂದರ್ಭದಲ್ಲಿ ಬಹಳ ವಿಭಿನ್ನವಾಗಿ ದೇವಸ್ಥಾನಗಳನ್ನು ಅಲಂಕರಿಸಲಾಗುತ್ತದೆ. ಮೊದಲು ಹೂಗಳ ಅಲಂಕಾರ ಮಾತ್ರ ನೋಡಿದ್ದೆವು, ಈಗೀಗ ಹೂ-ಹಣ್ಣು, ನೋಟು, ತರಕಾರಿಗಳನ್ನೂ ಅಲಂಕಾರಕ್ಕೆ ಬಳಸಲಾಗುತ್ತಿದೆ.

ಅದರಂತೆ ಕಲ್ಕತ್ತಾದಲ್ಲಿರುವ ದುರ್ಗಾಮಾತೆ ದೇವಾಲಯವನ್ನು ಪಾನಿಪೂರಿಯಿಂದ ಅಲಂಕರಿಸಲಾಗಿದೆ. ಕೋಲ್ಕತ್ತಾದಲ್ಲಿಯೂ ದಸರಾ ಆಚರಣೆಗಳು ಅದ್ಧೂರಿಯಾಗಿ ನಡೆಯುತ್ತಿದ್ದು, ಶಕ್ತಿ ದೇವತೆಯರ ದೇಗುಲಗಳು ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿವೆ.

ಕೋಲ್ಕತ್ತಾ ನಗರದ ದಕ್ಷಿಣ ಉಪನಗರವಾದ ಬೆಹಾಲಾದಲ್ಲಿನ ದುರ್ಗಾ ಮಂಟಪವನ್ನು ವಿನೂತನವಾಗಿ ಪಾನಿಪುರಿಗಳಿಂದ ಅಲಂಕೃತವಾಗಿದೆ. ಈ ದೇಗುಲದಲ್ಲಿ ಎಲ್ಲಿ ನೋಡಿದರೂ ಪಾನಿಪುರಿಗಳೇ ಕಾಣುತ್ತವೆ. ಪಾನಿಪುರಿಯಿಂದ ಅಲಂಕೃತವಾದ ಈ ದೇವಾಲಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!