ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರದ ಸರ್ಕಾರಿ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಮಹಿಳೆಯ ಹೊಟ್ಟೆಯಲ್ಲಿ ಮೂರು ಅಡಿ ಉದ್ದದ ಬಟ್ಟೆ ಸಿಕ್ಕಿದೆ!
ಕೋಲಾರ ಎಸ್ಎನ್ಆರ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ಘಟನೆ ಇದಾಗಿದೆ. ಮೇ 5 ರಂದು ಈ ಘಟನೆ ಬೆಳಕಿಗೆ ಬಂದಿದೆ. ಜಿಲ್ಲಾ ಆಸ್ಪತ್ರೆ ವೈದ್ಯೆ ನಾಗವೇಣಿ ಅವರಿಂದ ಈ ಯಡವಟ್ಟು ಆಗಿದೆ ಎಂದು ಮಹಿಳೆಯ ಮನೆಯವರು ಆರೋಪಿಸಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಹೊಟ್ಟೆಯೊಳಗೆ ಬಟ್ಟೆಯನ್ನು ಬಿಡಲಾಗಿದೆ. ನಂತರ ಮಹಿಳೆಗೆ ಹೊಟ್ಟೆನೋವು, ಇನ್ನಿತರ ಸಮಸ್ಯೆಗಳು ಬಂದಿವೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ರಾಮಸಾಗರ ನಿವಾಸಿ ಚಂದ್ರಿಕಾಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದು, ಚಂದ್ರಿಕಾ ಪತಿ ರಾಜೇಶ್ ರಿಂದ ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ವಿಜಯ್ ಕುಮಾರ್ಗೆ ದೂರು ನೀಡಿದ್ದಾರೆ. ಮಹಿಳೆ ಅನಾರೋಗ್ಯಕ್ಕೆ ಕ್ರೀಮ್ ಕೊಟ್ಟು ಸಮಸ್ಯೆ ಇಲ್ಲ ಎಂದು ಸಮಾಜಾಯಿಶಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ವೈದ್ಯರ ಬೇಜವ್ದಾರಿತನದ ವಿರುದ್ಧ ಮಹಿಳೆ ಸಂಬಂಧಿಕರು ಆರೋಪ ಮಾಡಿದ್ದಾರೆ.