ಹೊಸದಿಗಂತ ಡಿಜಿಟಲ್ ಡೆಸ್ಕ್:
ರಥದ ಚಕ್ರದಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ಶನಿವಾರ ಸಂಜೆ ಜರುಗಿದೆ.
ರೋಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಅವಘಡ ಸಂಭವಿಸಿದೆ
ರೋಣದ ವೀರಭದ್ರೇಶ್ವರ ಜಾತ್ರಾ ನಿಮಿತ್ತ ಸಂಜೆ ವೇಳೆಪಟ್ಟಣದ ರಾಜ ಬೀದಿಯಲ್ಲಿ ರಥವು ಸಾಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿನೂಕು ನುಗ್ಗಲುಂಟಾಗಿ ಕ್ಷಣಮಾತ್ರದಲ್ಲಿ ಚಕ್ರದಡಿ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
ಮೃತ ವ್ಯಕ್ತಿಗಳಲ್ಲಿ ಓರ್ವ ಮಲ್ಲಪ್ಪ ಲಿಂಗನಗೌಡರ್ (55) ಎಂದು ಗುರುತಿಸಲಾಗಿದ್ದು ಮತ್ತೊಬ್ಬನ ಗುರುತು ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ
ವ್ಯಕ್ತಿಯ ಮುಖದ ಮೇಲೆ ರಥದ ಚಕ್ರ ಸಾಗಿರುವುದರಿಂದ ಗುರುತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.