ದಸರಾ ಆನೆಗಳ ತೂಕ ಪರೀಕ್ಷೆ: ಒಂದೂವರೆ ತಿಂಗಳಲ್ಲಿ ಭಾರೀ ತೂಕ ಹೆಚ್ಚಿಸಿಕೊಂಡ ಅಭಿಮನ್ಯು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮೈಸೂರಿನಲ್ಲಿ ನವರಾತ್ರಿ, ದಸರಾ ಆಚರಣೆ ಎಲ್ಲರನ್ನೂ ಆಕರ್ಷಿಸುತ್ತಿದೆ. ದಸರಾ ಜಂಬೂಸವಾರಿಗೆ ಆಗಮಿಸಿರುವ ಆನೆಗಳು ತಾಲೀಮಿನಲ್ಲಿ ನಿರತವಾಗಿದ್ದು, ಅವುಗಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ.

ಆನೆಗಳ ತೂಕ ಪರೀಕ್ಷಿಸಲಾಗಿದ್ದು, ಈ ಪೈಕಿ ಅಂಬಾರಿ ಹೊರುವ ಆನೆ ಅಭಿಮನ್ಯು ತೂಕ 5560 ಕೆಜಿ ಯಿಂದ 5820ಗೆ ಏರಿಕೆಯಾಗಿದೆ. ಒಂದೂವರೆ ತಿಂಗಳ ಅಂತರದಲ್ಲಿ 260 ಕೆಜಿ ತೂಕ ಹೆಚ್ಚಿಸಿಕೊಂಡಿರುವ ಅಭಿಮನ್ಯು ಬಲಶಾಲಿಯಾಗಿದ್ದಾನೆ.

ದಸರಾ ಆನೆಗಳು ಮೈಸೂರಿಗೆ ಬಂದಾಗಿನಿಂದ ಇದು ಮೂರನೇ ಬಾರಿಯ ತೂಕ ಪರೀಕ್ಷೆಯಾಗಿದ್ದು 14 ಆನೆಗಳು ಭಾಗಿಯಾಗಿದ್ದವು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!