ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ದಸರಾ ಗಜಪಡೆಗಳ ತಾಲೀಮು ಇಂದಿನಿಂದ ಆರಂಭವಾಗಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗಳು ರಾಜಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿತು. ಅರಮನೆಯಿಂದ ಬನ್ನಿಮಂಟಪದವರೆಗೆ ದಸರಾ ಗಜಪಡೆಗಳ ಸಿದ್ಧತೆ ಆರಂಭವಾಗಿದೆ.
ದಸರಾ ಆನೆಗಳು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಹೋಗುತ್ತವೆ. ಮೊದಲ ಹಂತದಲ್ಲಿ ಕಾಡಿನಿಂದ 9 ಆನೆಗಳು ಅರಮನೆಗೆ ಬಂದವು. ಕ್ಯಾಪ್ಟನ್ ಅಭಿಮನ್ಯು ಮಾರ್ಗದರ್ಶನದಲ್ಲಿ ತರಬೇತಿ ಪ್ರಾರಂಭವಾಗಿದೆ.