ಗಾಳಿಯಲ್ಲಿ ಹರಡುವ ಧೂಳು ಮತ್ತು ಸೂಕ್ಷ್ಮ ಕಣಗಳು ಆರೋಗ್ಯಕ್ಕೆ ತೀವ್ರ ಹಾನಿ ಉಂಟುಮಾಡಬಹುದು. ವಿಶೇಷವಾಗಿ ಹೂವು, ಮರ, ಹುಲ್ಲಿನಿಂದ ಬರುವ ಪರಾಗ ಕಣಗಳು, ಪ್ರಾಣಿಗಳ ಕೂದಲಿನ ಕಣಗಳು, ಫಂಗಸ್ ಮತ್ತು ಬ್ಯಾಕ್ಟೀರಿಯಾಗಳು ಅಲರ್ಜಿಯನ್ನು ಹೆಚ್ಚಿಸುತ್ತವೆ. ಇದರ ಪರಿಣಾಮವಾಗಿ ಮೂಗು ಸೋರುವಿಕೆ, ಕಣ್ಣು ಉರಿ, ಉಸಿರಾಟ ತೊಂದರೆ, ಕೆಮ್ಮು, ತಲೆನೋವು, ಆಯಾಸ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಜೇನುತುಪ್ಪ – ಪ್ರತಿದಿನ ಎರಡು ಚಮಚ ಜೇನುತುಪ್ಪ ಸೇವನೆ ಅಲರ್ಜಿಯಿಂದ ಉಂಟಾಗುವ ಉರಿಯೂತವನ್ನು ತಗ್ಗಿಸುತ್ತದೆ. ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಬೆರೆಸಿ ಕುಡಿಯುವುದು ಉತ್ತಮ.
ನೀಲಗಿರಿ ಮತ್ತು ಲ್ಯಾವೆಂಡರ್ ಎಣ್ಣೆ – ಬಿಸಿ ನೀರಿನಲ್ಲಿ 4–5 ಹನಿ ನೀಲಗಿರಿ ಮತ್ತು ಲ್ಯಾವೆಂಡರ್ ಎಣ್ಣೆಗಳನ್ನು ಸೇರಿಸಿ ಆವಿಯನ್ನು ಉಸಿರಾಡುವುದರಿಂದ ಉಸಿರಾಟ ಸುಲಭವಾಗುತ್ತದೆ.
ಅಲೋವೆರಾ ರಸ – ತಾಜಾ ಅಲೋವೆರಾ ಜೆಲ್ನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ಉರಿಯೂತ ಮತ್ತು ಬ್ಯಾಕ್ಟೀರಿಯಾ ಸಮಸ್ಯೆ ಕಡಿಮೆಯಾಗುತ್ತದೆ.
ಅರಿಶಿನ ಮತ್ತು ಕರಿಮೆಣಸು ಹಾಲು – ಬಿಸಿ ಹಾಲಿನಲ್ಲಿ ಅರ್ಧ ಟೀಚಮಚ ಅರಿಶಿನ, ಸ್ವಲ್ಪ ಕರಿಮೆಣಸು ಮತ್ತು ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ದೇಹದ ಪ್ರತಿರೋಧ ಶಕ್ತಿ ಹೆಚ್ಚುತ್ತದೆ.
ಆಪಲ್ ಸೈಡರ್ ವಿನೆಗರ್ – ಬೆಚ್ಚಗಿನ ನೀರಿನಲ್ಲಿ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಅಲರ್ಜಿ ಕಡಿಮೆಯಾಗುತ್ತದೆ.
ಧೂಳಿನ ಅಲರ್ಜಿ ತಡೆಗೆ ಮನೆಮದ್ದುಗಳು ಸಹಾಯಕವಾಗಿದ್ದರೂ, ಸ್ವಚ್ಛತೆಯ ನಿರ್ವಹಣೆ, ಗಾಳಿಯಲ್ಲಿ ಹರಡುವ ಧೂಳಿನಿಂದ ದೂರವಿರುವುದು, ಮಾಸ್ಕ್ ಧರಿಸುವುದು ಮತ್ತು ವೈದ್ಯರ ಸಲಹೆ ಪಡೆಯುವುದು ಮುಖ್ಯ. ನಿಯಮಿತವಾಗಿ ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದರಿಂದ ಅಲರ್ಜಿ ಲಕ್ಷಣಗಳನ್ನು ನಿಯಂತ್ರಿಸಿ ಆರೋಗ್ಯ ಕಾಪಾಡಬಹುದು.