ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರಿನ ದತ್ತಾತ್ರೇಯ ದೇವಸ್ಥಾನಕ್ಕೆ ಭಕ್ತರಿಂದ ಕೋಟಿ ಕೋಟಿ ಹಣ ಹಾಗೂ ಚಿನ್ನಾಭರಣ ದೇವಸ್ಥಾನದ ಹುಂಡಿಗೆ ಹರಿದು ಬಂದಿವೆ.
97,10,152 ರೂಪಾಯಿ ನಗದು ಹಣವನ್ನು ಭಕ್ತರು ಹುಂಡಿಗೆ ಧಾರೆಯೆರೆದಿದ್ದು,26 ಗ್ರಾಂ ಚಿನ್ನ,500 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಜಮೆಯಾಗಿದೆ.
ತಹಶೀಲ್ದಾರ್ ಹಾಗೂ ದಘವಸ್ಥಾನದ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಹುಂಡಿಯ ಎಣಿಕೆ ಕಾರ್ಯ ಮುಗಿದಿದ್ದು,ಶಕ್ತಿ ಯೋಜನೆ ಜಾರಿ ಬಳಿಕ ಮೊದಲ ಬಾರಿಗೆ ಹುಂಡಿಯ ಎಣಿಕೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಮಾಡಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರಿನ ದತ್ತಾತ್ರೇಯ ಸನ್ನಿಧಿಗೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂದ್ರ ಸೇರಿದಂತೆ ಹಲವರು ಭೇಟಿ ನೀಡಿ,ಆಶೀರ್ವಾದ ಪಡೆದು ಪುನೀತರಾಗುತ್ತಾರೆ.