ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಮಾಡುವೆ ವಿಚಾರದಲ್ಲಿ ಸುದ್ದಿಯಾಗಿರುವ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ 2.3 ಅಡಿ ಎತ್ತರದ ವ್ಯಕ್ತಿಗೆ ಕೊನೆಗೂ ವಿವಾಹದಯೋಗ ಕೂಡಿಬಂದಿದ್ದು, ತಮ್ಮ ಮದುವೆಯನ್ನು ವಿಭಿನ್ನವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾನೆ. ಇನ್ನು ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮದುವೆಗೆ ಆಹ್ವಾನಿಸಲು ಬಯಸಿದ್ದಾರೆ.
ಇದೇ ನವೆಂಬರ್ 7ರಂದು ಅಜೀಂ ಮನ್ಸೂರಿ ಅವರು ಮದುವೆಯಾಗಲು ಸಿದ್ಧರಾಗಿದ್ದು, ಮದುವೆಯ ಆಮಂತ್ರಣ ಪತ್ರಗಳನ್ನು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಅವರಿಗೆ ನೀಡುವುದಾಗಿ ಹೇಳಿದ್ದಾರೆ.
‘ನಾನು ದೆಹಲಿಗೆ ಹೋಗುತ್ತೇನೆ ಮತ್ತು ಅವರನ್ನು ಆಹ್ವಾನಿಸುತ್ತೇನೆ’ ಎಂದು ಅಜೀಂ ಮನ್ಸೂರಿ ತಿಳಿಸಿದ್ದಾರೆ.
ಮನ್ಸೂರಿ ಅವರು ಹಲವಾರು ವರ್ಷಗಳಿಂದ ವಧುವನ್ನು ಹುಡುಕುತ್ತಿದ್ದರು, ವಧುವನ್ನು ಹುಡುಕಲು ಸಹಾಯ ಮಾಡುವಂತೆ ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಸಂಪರ್ಕಿಸಿದ್ದರು. ಕೊನೆಗೂ ಇವರಿಗೆ ವಧು ಸಿಕ್ಕಿದ್ದಾಳೆ. ಹಾಪುರ್‌ನ 3 ಅಡಿ ಎತ್ತರದ ಬುಷಾರಾ ಎಂಬವರ ಜೊತೆ ದಾಂಪತ್ಯಕ್ಕೆ ಕಾಲಿರಿಸಲು ಸಿದ್ಧತೆ ನಡೆದಿದೆ.