ಶಿವಮೊಗ್ಗದಲ್ಲಿ ಜಾರಿಯಾಗದ ಇ-ಆಫೀಸ್ : ಸಚಿವ ಕೃಷ್ಣ ಭೈರೇಗೌಡ ತರಾಟೆ

ಹೊಸದಿಗಂತ ವರದಿ ಶಿವಮೊಗ್ಗ:

ತಹಶಿಲ್ದಾರರ ಕಚೇರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಗಳಲ್ಲಿ ಇನ್ನೂ ಇ-ಕಚೇರಿ ಕಾರ್ಯಗತ ಆಗದೇ ಇರುವುದಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ತಾಲೂಕು ಕಚೇರಿಗೆ ಬುಧವಾರ ದಿಢೀರ್ ಭೇಟಿ ನೀಡಿದ ಅವರು, ರೈತರಿಗೆ ಪಹಣಿ ಹಾಗೂ ಮ್ಯುಟೇಶನ್ ವಿತರಣಾ ವಿಭಾಗದಲ್ಲಿ ಪರಿಶೀಲನೆ ನಡೆಸಿದರು.

ಈ ವೇಳೆ ಕಚೇರಿಯಲ್ಲಿ ಇ- ಆಫೀಸ್ ಚಾಲನೆಯಲ್ಲಿದೆ ಎಂದು ಬೋರ್ಡ್ ಹಾಕಿಕೊಂಡಿದ್ದನ್ನು ಗಮನಿಸಿದರು. ಆದರೂ ಕಾಗದ ಪತ್ರದಲ್ಲಿ ವ್ಯವಹಾರ ಮಾಡುತ್ತಿದ್ದೀರಿ. ಬೋರ್ಡ್ ಫೋಟೋ ಹೊಡೆಸಿಕೊಳ್ಳಲು ಹಾಕಿಕೊಂಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಎಸಿ ಕಚೇರಿಂದ ತಹಶಿಲ್ದಾರರ ಕಚೇರಿಗೇ ಪತ್ರ ವ್ಯವಹಾರ ನಡೆಯುತ್ತಿದೆ. ಇಲ್ಲೇ ನೀವು ಇ- ಆಫೀಸ್ ಜಾರಿ ಮಾಡಿಲ್ಲ. ಇನ್ನು ಸಾರ್ವಜನಿಕರಿಗೆ ಹೇಗೆ ತ್ವರಿತವಾಗಿ ಸೇವೆ ನೀಡುತ್ತೀರಿ? ನೀವು ಸ್ವಿಚ್ ಆನ್ ಮಾಡದೇ ಲೈಟ್ ಹತ್ತಲಿ ಎಂದು ಆಕಾಶ ನೋಡುತ್ತಿದ್ದೀರಿ. ಮೊದಲು ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಸೂಚನೆ ನೀಡಿದರು.  ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!